ಮಾಧ್ಯಮ ಸಿರಿ ಗೌರವ – ಪತ್ರಕರ್ತ ಸೋಮರಡ್ಡಿ ಅಳವಂಡಿ.

ಕೊಪ್ಪಳ-01- ಬೆಂಗಳೂರಿನ ಉತ್ತರ ಕರ್ನಾಟಕ ಬಳಗ ಕೊಡುಮಾಡುವ ಮಾಧ್ಯಮ ಸಿರಿ ಗೌರವ ಪ್ರಶಸ್ತಿಗೆ  ಕನ್ನಡಪ್ರಭ ಕೊಪ್ಪಳ ಜಿಲ್ಲಾ ವರದಿಗಾರ ಸೋಮರಡ್ಡಿ  ಅಳವಂಡಿ ಸೇರಿದಂತೆ ೧೧ ಪತ್ರಕರ್ತರನ್ನು  ಆಯ್ಕೆ ಮಾಡಲಾಗಿದೆ.
ಉತ್ತರ ಕರ್ನಾಟಕ ಬಳಗ ಗೌರವಾಧ್ಯಕ್ಷ ಪಾಲಾಕ್ಷ ಬಾಣದ ಅವರು ಪತ್ರಿಕಾ ಪ್ರಕಟಣೆಯಲ್ಲಿ  ಈ ವಿಷಯ ತಿಳಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಕುವೆಂಪು ಕಲಾಕ್ಷೇತ್ರದಲ್ಲಿ  ಜ. ೩ ರಂದು ಬೆಳಗ್ಗೆ  ೯.೩೦ ಕ್ಕೆ ನಡೆಯುವ  ಹಬ್ಬ ಮಾಡೋಣ ಬರ್ರ್‍ಇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ರಂಜಾನ್ ದರ್ಗಾ, ಶಿವಕುಮಾರ ಭೋಜಶೆಟ್ಟರ್, ಮಲ್ಲಿಕಾರ್ಜುಸ ಹುಲಗಬಾಳಿ, ಗುರುಲಿಂಗಸ್ವಾಮಿ ಹೊಳಿಮಠ,  ರಂಜಿನಿ ಪಾಟೀಲ, ನಿರ್ಮಲಾ ಚಂದ್ರಶೇಖರ  ಯಲಿಗಾರ, ರಾಧಾ ಹಿರೇಗೌಡರ ಹಾಗೂ ಸ್ವರೂಪ ಮುರುಗೊಡ ಅವರು ಪ್ರಶಸ್ತಿ ವಿಜೇತರು.

Please follow and like us:
error