೫೨೬ನೇ ಕನಕದಾಸ ಜಯಂತಿ ಆಚರಣೆ

ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ೫೨೬ನೇ ಜಯಂತಿಯನ್ನು ಆಚರಿಸಲಾಯಿತು.  ಸಂಸ್ಥೆಯ ಅಧ್ಯಕ್ಷರಾದ   ದಾನಪ್ಪ ಜಿ.ಕೆ. ಉಪಸ್ಥಿತರಿದ್ದರು.  ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.  ಕನಕದಾಸರ ಜೀವನದ ಬಗ್ಗೆ ಅವರ ದಾಸ ಸಾಹಿತ್ಯದ ಕೃಷಿಯ ಬಗ್ಗೆ ಅನೇಕ ವಿದ್ಯಾರ್ಥಿಗಳು ಮಾತನಾಡಿದರು.  ಈ ಸಂದರ್ಭದಲ್ಲಿ ಮುಖೋಪಾಧ್ಯಾಯಿನಿರಾದ ಜ್ಯೋತಿ ಎಸ್. ಎಸ್. ಅವರು ಕನಕದಾಸರ ಜೀವನದ ಬಗ್ಗೆ ಅವರ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.  ಹಾಗೆಯೇ ಕನಕದಾಸರ ಕೀರ್ತನೆಯನ್ನು ಹಾಡುವ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಯಿತು. ಸಹ ಶಿಕ್ಷಿಯಾದ ಚಾಮುಂಡಿ ಮೇಟಿ ವಂದಿಸಿದರು. 

Leave a Reply