ಶನಿವಾರ ನಗರಕ್ಕೆ ಬಿ. ಶ್ರೀರಾಮುಲು

ಕೊಪ್ಪಳ ನಗರಕ್ಕಿಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸ್ವಾಭಿಮಾನಿ ಬಿ. ಶ್ರೀರಾಮುಲು ಭೇಟಿ
ಕೊಪ್ಪಳ,ಮಾ.೦೧: ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ಅಂಗವಾಗಿ ಇದೇ ದಿ. ೨ ರಂದು ಶನಿವಾರ ನಗರಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸ್ವಾಭಿಮಾನಿ ಬಿ. ಶ್ರೀರಾಮುಲು ಆಗಮಿಸಲಿದ್ದಾರೆ ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್ ತಿಳಿಸಿದ್ದಾರೆ. 
                           ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಸ್ವಾಭಿಮಾನಿ ಬಿ. ಶ್ರೀರಾಮುಲುರವರು ಅಂದು ಮಧ್ಯಾಹ್ನ ೩ ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಡಿಸಿ ಕಛೇರಿ ಎದುರಿನ ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಬ್ದುಲ್ ಕಲಾಂ ಕಾಲೇಜ್ ಬಯಲು ಮೈದಾನದಲ್ಲಿ ಸಿದ್ದಪಡಿಸಿದ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ಅವರನ್ನು ಸ್ವಾಗತ ಕೋರಿ, ಗಂಜ್ ವೃತ್ತದಿಂದ ಬೈಕ್ ರ್‍ಯಾಲಿ ಪ್ರಾರಂಭಿಸಲಿದ್ದಾರೆ. ನಂತರ ಅವರು ಬಿ.ಟಿ. ಪಾಟೀಲ್ ನಗರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಮಹಾಂತೇಶ ಗ್ಯಾಸ್ ರವರ ಮನೆಯಲ್ಲಿ ಪ್ರೀತಿಯ ಭೋಜನಾಕೂಟಕ್ಕೆ  ತೇರಳಲಿದ್ದಾರೆ. ಅಲ್ಲಿಂದ ರ್‍ಯಾಲಿ ಮೂಲಕ ಜಾವಾಹರ್ ಮುಖ್ಯ ರಸ್ತೆ ಮೂಲಕ ಶಿರಸಪ್ಪಯ್ಯನಮಠದವರೆಗೂ ತೇರಳಿ ನಂತರ ಗಡಿಯಾರ ಕಂಬ, ಅಂಬೇಡ್ಕರ್ ವೃತ್ತ ಹಾಗೂ ತೆಗ್ಗಿನಕೇರಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ವಿವಿಧ ಮುಖಂಡರು ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ವಾರ್ಡಗಳ ಪಕ್ಷದ ಅಭ್ಯರ್ಥಿಗಳು ಉಪಸ್ಥಿತರಿರುವರು,ಸಭೆಗೆ ಅಪಾರ ಪ್ರಮಾಣದ ಜನತೆ ಸೇರಲಿದೆ ಎಂದು  ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್ ವಿವರಿಸಿದ್ದಾರೆ. 
Please follow and like us:
error