ಬಡ್ತಿಯಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ ಮಿಸಲಾತಿ : ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕ

ರರ ಸಂಘದ ವತಿಯಿಂದ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಬೆಂಗಳೂರಿನ ಅವರ ಕಛೇರಿ ಗೃಹವಾದ ಕೃಷ್ಣಾದಲ್ಲಿ ಮನವಿ ಸಲ್ಲಿಸಲಾಯಿತು.

   ಈ ಸಂದರ್ಭದಲ್ಲಿ ಸಂಘಧ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರ್ಕಾರಿ ಅಂಗವಿಕಲ ನೌಕರರಿಗೆ ಎ ಮತ್ತು ಬಿ ವಲಯಗಳಿಗೆ ಶೇಕಡಾ ೩ರಷ್ಟು ಸಿ.ಮತ್ತು ಡಿ ವಲಯಗಳಿಗೆ ಶೇಕಡಾ ೫ರಷ್ಟು ನೇಮಕಾತಿ ಸಮಯದಲ್ಲಿ ಮಿಸಲಾತಿಯಿದೆ.ಆದರೆ ಬಡ್ತಿಯಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ ಮಿಸಲಾತಿಯಲ್ಲಿ ಯಾವುದೇ ರೀತಿಯ ಅವಕಾಶವಿಲ್ಲ.ಬಡ್ತಿಯಲ್ಲಿ ಮೀಸಲಾತಿ ನೀಡಬೇಕು.ಅಂಗವಿಕಲ ಶಿಕ್ಷಕರಿಗೆ ವರ್ಗಾವಣೆಯಲ್ಲಿ ೩ ವರ್ಷ ಒಂದೆ ಕಡೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ನಿಯಮದಿಂದ ಅಂಗವಿಕಲ ಶಿಕ್ಷಕರಿಗೆ ವಿನಾಯತಿ ನೀಡಬೇಕು.ಈಗಾಗಲೇ ವರ್ಗಾವಣೆಗೊಂಡ ಶಿಕ್ಷಕರಿಗೆ ಪಿ.ಟಿ.ಆರ್.ನಿಯಮ ಎಂಬ ನಿಯಮವನ್ನು ತೆಗೆದು ಹಾಕಿ ಕೂಡಲೇ ಅವರುಗಳನ್ನು ವರ್ಗಾವಣೆಗೊಂಡ ಸ್ಥಳಗಳಿಗೆ ಬಿಡುಗಡೆಗೊಳಿಸಲು ಸೂಚಿಸಬೇಕು.ನಿರುದ್ಯೋಗಿ ಅಂಗವಿಕಲರಿಗೆ ನೀಡುವ ಮಾಸಾಶನವನ್ನು ಹೆಚ್ಚಿಸಬೇಕು.ಅಂಗವಿಕಲರಿಗಾಗಿ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಬೇಕು.ಅಂಗವಿಕಲ ಮಹಿಳೆಯರು ಅದರಲ್ಲೂ ವಿಶೇಷವಾಗಿ ಮಾತುಬಾರದ ಮೂಕಿಯರ ಮೇಲೆ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿದ್ದು,ಅಂಥಹ  ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿPಯನ್ನು ನೀಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯಾ ಮಾತನಾಡುತ್ತ,ಸರ್ಕಾರಿ ಅಂಗವಿಕಲ ನೌಕರರ ಹಾಗೂ ನಿರುದ್ಯೋಗಿ ಅಂಗವಿಕಲರ ಬೇಡಿಕೆಗಳು ನ್ಯಾಯುತವಾಗಿದ್ದು ಅವುಗಳನ್ನು ಇಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ ಹಾಜರಿದ್ದರು.
ಪೋಟೊ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಾನವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದಿಂದ ಬೆಂಗಳೂರಿನ ಅವರ ಕಛೇರಿ ಕೃಷ್ಣಾದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಸಲ್ಲಿಸಿದರು.
Please follow and like us:
error