ವಿಶ್ವ ಕಾರ್ಮಿಕರೆ ಒಂದಾಗಿ

ಮೇ. ೦೧ ರಂದು ೧೨೮ ನೇ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಹಿಂದೂಸ್ಥಾನ ಕೋಕೋಕೋಲಾ ಬೆವರಿಜಿಸ್  ವರ್ಕಸ್ ಆಕ್ಷನ ಕಮಿಟಿಯೂ  ಕಾರ್ಮಿಕರು  ಬೈಕಜಾಥಾವನ್ನು ಹಮ್ಮಿಕೊಂಡಿದ್ದು  ಕೊಪ್ಪಳದ ಮ.ನಿ.ಜ.ಪ.ಸ. ಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬೈಕ್ ರ‍್ಯಾಲಿ ಜಾಥಕ್ಕೆ  ಚಾಲನೆ ನೀಡಿದರು. 
                    ಕಾರ್ಮಿಕರು ದಿನಾಚರಣೆಯನ್ನು ವಿಜೃಂಬಣೆಯಿಂದ ಆಚರಿಸಿದರು. ಸಂಘಟನೆಯ  ಅದಕ್ಷರಾದ ಚನ್ನವೀರಯ್ಯ ಹಿರೇಮಠ ಮಾತನಾಡಿ ಜಗತ್ತನ್ನು ವಿನಾಶದತ್ತ ಕೊಂಡೊಯ್ಯುವ, ಸಾಮ್ರಾಜ್ಯ ಶಾಹಿ ವ್ಯವಸ್ಥೆಯ ವಿರುದ್ದ ಕ್ರಾಂತಿಗಿಳಿದು ಹೋರಾಡಬೇಕಿದೆ ಕಂಪನಿಯೂ ಕಾರ್ಮಿಕರ ಮೂಲಭೂತವಾದ ಕೋಮವಾದ ಜಾತಿ, ಭಾಷೆ, ಗಡಿ ಹೆಸರಿನಲ್ಲಿ ಸಾಮ್ರಾಜ್ಯಶಾಹಿ, ಕಾರ್ಮಿಕರ ಚಳುವಳಿಯನ್ನು ದುರ್ಬಲಗೊಳಿಸುವ ಪ್ರಗತಿ. ವಿರೋಧಿಶಕ್ತಿಗಳ ಮಗ್ಗಲು ಮುರಿಯುವ ದಿಟ್ಟತನದ ಶಪಥ ಮಾಡಿ ಎಲ್ಲಾ ಕಾರ್ಮಿಕರು ಸಾಮ್ರಾಜ್ಯ ಶಾಹಿಗಳಿಗೆ   ದಿಟ್ಟ

ಉತ್ತರ ನೀಡಬೇಕೆಂದು ಎಂದು ಮಾತನಾಡಿದರು. ನಂತರ ಚನ್ನಪ್ಪ ಸಿದ್ದಾಪೂರ ಸಭೆಯನ್ನು ಮುಕ್ತಾಯಗೊಳಿಸಿದರು. ಬೈಕ್ ಜಾಥಾ ರ‍್ಯಾಲಿಯಲ್ಲಿ ನೂರಾರು ಕಾರ್ಮಿಕರು ಜಗತ್ತಿನ ಎಲ್ಲಾ ಶ್ರಮಜಿವಿಗಳೆ ಒಂದಾಗಿ ಎಂದು ಗೋಷಣೆ  ಕುಗುತ್ತಾ ಕಾರ್ಮಿಕರ ದಿನಾಚರಣೆಯನ್ನು  ವಿಜೃಂಬಣೆಯಿಂದ ಆಚರಿಸಿದರು.

Leave a Reply