You are here
Home > Koppal News > ವಿಶ್ವ ಏಡ್ಸ್ ದಿನ-೨೦೧೪ಕಾರ್ಯಕ್ರಮಗಳ ವಿವರ

ವಿಶ್ವ ಏಡ್ಸ್ ದಿನ-೨೦೧೪ಕಾರ್ಯಕ್ರಮಗಳ ವಿವರ

  ಜಾಥಾ ಕಾರ್ಯಕ್ರಮ 
  ಕೃಷ್ಣ ಉದಪುಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ಡಾ|| ಶ್ರೀಕಾಂತ್ ಆರ್ ಬಾಸೂರ, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಕೊಪ್ಪಳ ಇವರು ಬೆಳಿಗ್ಗೆ ೯.೦೦ ಕ್ಕೆ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೆಚ್‌ಐವಿ/ ಏಡ್ಸ್ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಗೃತಿ ಜಾಥವು ಹಳೇ ಜಿಲ್ಲಾ ಆಸ್ಪತ್ರೆ ಆವರಣದಿಂದ ಹೊರಟು  ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರಕಂಬ, ಡಾ|| ಸಿಂಪಿ ಲಿಂಗಣ್ಣ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಮೂಲಕ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಸಮಾರೋಪಗೊಂಡಿತು. ಜಾಗೃತಿ ಜಾಥಾದಲ್ಲಿ ಕೋಲಾಟ ಹಾಗೂ ಗೀಗೀ ಪದ ಕಲಾ ತಂಡಗಳಿಂದ ಹೆಚ್.ಐ.ವಿ. ಕುರಿತು ಜಾಗೃತಿ ಮೂಡಿಸಲಾಯಿತು.
೨. ವೇದಿಕೆ ಕಾರ್ಯಕ್ರಮ 
ಮಾನ್ಯ   ಬಿ. ದಶರಥ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು,      ಡಾ|| ಎಸ್.ಬಿ. ದಾನರಡ್ಡಿ, ಮಾನ್ಯ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಕೊಪ್ಪಳ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಶ್ರೀಮತಿ ಸಂಧ್ಯಾ ಬಿ. ಮಾದನೂರು, ಅಧ್ಯಕ್ಷರು ಲಾ ಅಕಾಡೆಮಿ ಹಾಗೂ ಸದಸ್ಯರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು, ಶ್ರೀ ಹನುಮಂತರಾವ್, ವಕೀಲರು ಕೊಪ್ಪಳ, ಡಾ|| ಬಿ.ಎಂ. ಪ್ರಭು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಹಾಗೂ ಡಾ|| ರೇಖಾ ಎಂ, ಎ.ಆರ್.ಟಿ. ವೈದ್ಯಾಧಿಕಾರಿಗಳು ಜಿಲ್ಲಾ ಆಸ್ಪತ್ರೆ ಕೊಪ್ಪಳ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಮೇಲ್ಕಂಡ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಕೊಪ್ಪಳ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ, ಜಿಲ್ಲಾ ಆಸ್ಪತ್ರೆಯ ಐಸಿಟಿಸಿ, ಡಿಎಸ್‌ಆರ್‌ಸಿ, ಎಆರ್‌ಟಿ, ಆಶಾ ಮೆಂಟರ್ ಹಾಗೂ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯಧಿಕಾರಿಗಳ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಸಿಬ್ಬಂದಿ, ಸಂರಕ್ಷ ಸಂಸ್ಥೆ, ಸ್ನೇಹಾ ಮಹಿಳಾ ಸಂಘ, ಹೊಂಗಿರಣ ಸಮಾಜ ಸೇವಾ ಸಂಸ್ಥೆ, ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾ ಸಂಘ, ಚೈತನ್ಯ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಘ, ನವಜ್ಯೋತಿ ನೆಟ್‌ವರ್ಕ್, ಆರ್‌ಡಿಎಸ್ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Leave a Reply

Top