You are here
Home > Koppal News > ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಕೆ.ರಾಘವೇಂದ್ರ ಹಿಟ್ನಾಳ

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಕೆ.ರಾಘವೇಂದ್ರ ಹಿಟ್ನಾಳ

ಜೀನಿಯಸ್ ಪಬ್ಲಿಕ್ ಸ್ಕೂಲಿನಲ್ಲಿ ನಾಲ್ಕನೇ ಶಾಲಾ ವಾರ್ಷಿಕೋತ್ಸವ ಸುಂದರ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸ್ಥಾನವನ್ನು ವಹಿಸಿದ ಶಾಸಕರಾದ    ಕೆ.ರಾಘವೇಂದ್ರ ಹಿಟ್ನಾಳ ತಮ್ಮ ವಯಕ್ತಿಕ ಜೀವನವನ್ನು ನೆನಸುತ್ತಾ, ಮಕ್ಕಳು ಉತ್ತಮ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗಧರ್ಶನ ಪಡೆದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. 
ಉದ್ಘಾಟಣೆ   ಜಿ.ದೇವಪ್ಪ ಅಪೋಲೋ ಗ್ರುಫ್ ಹೊಸಪೇಟರವರು ನೆರವೇರಿಸಿದರು.ಅತಿಥಿಗಳಾಗಿ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ ಅಧ್ಯಕ್ಷರು ನಗರಸಭೆ,  ಬಾಳಪ್ಪ ಬಾರಕೇರ ಉಪಾಧ್ಯಕ್ಷರು ನಗರಸಭೆ, ರಾಮಣ್ಣ ಹದ್ದಿನ ಅಧ್ಯಕ್ಷರು ಸ್ಥಾಯಿ ಸಮಿತಿ ನಗರಸಭೆ, ಶರಣಪ್ಪ ಚಂದನಕಟ್ಟಿ ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಕಾರ್ಯದರ್ಶಿಗಳಾದ ನಾಗರಾಜ ಚಿಲವಾಡಗಿ ಶಾಲಾ ವಾರ್ಷಿಕ ವಾಚನ ಮಾಡಿದರು.
ಈ ಕಾರ್ಯಕ್ರಮಕ್ಕೆ ಶಾಲೆಯ ಸಹಶಿಕ್ಷಕರಾದ ಶ್ರೀಮತಿ ನೇತ್ರಾ ಚನ್ನ್ನಯ್ಯ ,ಶ್ರೀಮತಿ ಪವಿತ್ರಾ ಪಾಟೀಲ್, ಕುಮಾರಿ ನೇತ್ರಾ ಬಂಗಾರಿ,ಶ್ರೀಮತಿ ಅರುಣಾ ಮುದಗಲ್ಲ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಶ್ರೀಮತಿ ನೀಲಮ್ಮ ಸರ್ವಿ ನಿರೂಪಣೆ ಮಾಡಿದರು. ಶ್ರೀಮತಿ ವಿನೂತಾ ಸ್ವಾಗತಿಸಿದರು. ಶ್ರೀಮತಿ ಲತಾ ನೀಡಗುಂದಿ ವಂದಿಸಿದರು. 

Leave a Reply

Top