ಕಾರ್ಮಿಕ ದಿನಾಚರಣೆಯಂದು ಪೌರಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವ ಕಾರ್ಮಿಕ ವಿರೋಧಿ ಗಂಗಾವತಿ ನಗರಸಭೆ

ದಿನಾಂಕ ೦೧-೦೫-೨೦೧೫ ರಂದು ವಿಶ್ವ ಕಾರ್ಮಿ ದಿನಾಚರಣೆಯಂದು ಪೌರ ಕಾರ್ಮಿಕರಿಗೆ ವೇತನದ ರಜೆ ಕೊಡದೆ ಕೆಲಸ ಮಾಡಿಸುತ್ತಿರುವ ಕಾರ್ಮಿಕ ವಿರೋಧಿ ಗಂಗಾವತಿ ನಗರಸಭೆ ಅಧಿಕಾರಿಗಳಿಗೆ ನಮ್ಮ ಧಿಕ್ಕಾರವಿದೆ ಎಂದು ಭಾರಧ್ವಾಜ್   ತಿಳಿಸಿದ್ದಾರೆ.

ಪೌರ ಕಾರ್ಮಿಕರಿಗೆ ಏಳು ತಿಂಗಳಿನಿಂದ ಸಂಬಳ ಕೊಡದೇ ಹೀನಾಯವಾಗಿ ದುಡಿಸಿಕೊಳ್ಳುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಸರಕಾರ ಕಾನೂನು ಕ್ರಮ ಜರುಗಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ವೇತನಕ್ಕಾಗಿ ದೂರು ಸಲ್ಲಿಸಿದರೂ ಕಾರ್ಮಿಕ ಇಲಾಖೆಯ ಜಂಟಿ ನಿರ್ದೇಶಕರು ಮೌನವಹಿಸಿರುವುದು ಕಾರ್ಮಿಕರ ದೂರನ್ನು ಯಾವುದೇ ಪರಿಶೀಲಿಸದೇ ನಗರಸಭೆ ವಿರುದ್ಧ ಯಾವುದೇ ಕ್ರಮ ಜರುಗಿಸದ ಕಾರ್ಮಿಕ ಇಲಾಖೆ ವಿರುದ್ಧ ಶೀಘ್ರದಲ್ಲಿಯೇ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ.
ಪೌರ ಕಾರ್ಮಿಕರ ವೇತನ ಬಾಕಿ ನೀಡದೇ ಇರುವುದರಿಂದ ನ್ಯಾಯ ಕೊಡಿಸಲು ಸಫಾಯಿ ಕರ್ಮಚಾರಿ ಆಯೋಗದಲ್ಲಿ ದೂರು ದಾಖಲಿಸಲಾಗುವುದೆಂದು ಭಾರಧ್ವಾಜ್  ಎಚ್ಚರಿಸಿದ್ದಾರೆ.
Please follow and like us:
error