ಕೆಐಎಡಿಬಿ ಭೂ ಹಗರಣ : ಕಂಬಿ ಹಿಂದೆ ಕೆಟ್ಟಾ, ಪುತ್ರಬೆಂಗಳೂರು, ಆ.8: ಬಹುಚರ್ಚಿತ ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳಾದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ನಾಯ್ಡು ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರ ಪ್ರಕರ ಣದ ವಿಚಾರಣೆಯ ಸಂದರ್ಭದಲ್ಲೇ ಮಾಜಿ ಸಚಿವರೊಬ್ಬರು ಜೈಲು ಪಾಲಾದ ಅಪರೂಪದಪ್ರಕರಣಕ್ಕೂ ಈ ದಿನ ಸಾಕ್ಷಿಯಾಯಿತು. ಕಟ್ಟಾ ಸುಬ್ರಹ್ಮಣ್ಯ ಹಾಗೂ ಕಟ್ಟಾ ಜಗದೀಶ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಟ್ಟಾದ್ವಯ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಯನ್ನು ಪೂರ್ಣಗೊಳಿಸಿದ್ದ ಹೆಚ್ಚುವರಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್, ಸೋಮವಾರ ಜಾಮೀನು ಅರ್ಜಿ ತಿರಸ್ಕರಿಸಿ ಇಬ್ಬರನ್ನು ಆ.22ರವರೆಗೆ ನ್ಯಾಯಾಂಗ ವಶಕ್ಕೆ ತೆಗದು ಕೊಳ್ಳುವಂತೆ ಆದೇಶ ನೀಡಿದರು.ಕಣ್ಣೀರಿಟ್ಟ ಕಟ್ಟಾ: ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಆದೇಶ ನೀಡುತ್ತಿದ್ದಂತೆಯೆ ಕಟಕಟೆಯಲ್ಲಿ ನಿಂತಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗಳಗಳನೆ ಕಣ್ಣೀರಿಟ್ಟರು. ಮಗ ಜಗದೀಶ್ ಮತ್ತು ಶ್ರೀನಿವಾಸ್ ತಮ್ಮ ಮೋರೆಗಳನ್ನು ಸಪ್ಪೆಯಾಗಿಸಿಕೊಂಡರು.

ಅತ್ತ ಪ್ರಮಾಣ ವಚನ, ಇತ್ತ ಕಾರಾಗೃಹ ಪ್ರವೇಶ: ಒಂದು ಕಡೆ ರಾಜಭವನದಲ್ಲಿ ಡಿವಿ ಸದಾನಂದ ಗೌಡರ ಸಂಪುಟ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಕಡೆ ಬಿಜೆಪಿಯ ಪ್ರಭಾವಿ ಮುಖಂಡ ಮತ್ತು ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಕಾರಾಗೃಹ ಪ್ರವೇಶಕ್ಕೆ ಪ್ರಯಾಣ ಬೆಳೆಸಿದುದು ವಿಪರ್ಯಾಸ. Varthabharati

Leave a Reply