You are here
Home > Koppal News > ನ. ೯ ರಂದು ಕೊಪ್ಪಳದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ನ. ೯ ರಂದು ಕೊಪ್ಪಳದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ಕೊಪ್ಪಳ ನ.  : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೃತ್ಯ ರೂಪಕ, ನಾಟಕ, ರಂಗಗೀತೆಗಳನ್ನೊಳಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನ. ೦೯ ರಂದು ಸಂಜೆ ೬ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಲಿದೆ.
        ಸಾಹಿತಿ ಹೆಚ್.ಎಸ್. ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ, ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರು,   ಹಿರಿಯ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಕುಕನೂರು ಅವರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ಸಂಜೆ ೬ ಗಂಟೆಗೆ ಇಲಕಲ್‌ನ ಡ್ಯಾನ್ಸ್ ಅಕಾಡೆಮಿಯ ಬಿ. ರವಿ ಅವರಿಂದ ನೃತ್ಯ ರೂಪಕ, ೬-೩೦ ಗಂಟೆಗೆ ಬೆಂಗಳೂರಿನ ಪ್ರಯೋಗಶೀಲರ ಟ್ರಸ್ಟ್ ಅವರಿಂದ ರಂಗಗೀತೆಗಳು ಹಾಗೂ ರಾತ್ರಿ ೭ ಗಂಟೆಗೆ ಬೆಂಗಳೂರಿನ ರಂಗ ಸುಗ್ಗಿ ಟ್ರಸ್ಟ್ ಅವರ ವತಿಯಿಂದ ಬಿ.ಟಿ. ಮುನಿರಾಜಯ್ಯ ರಚಿತ, ತುಮಕೂರು ಶಿವಕುಮಾರ್ ಅವರ ನಿರ್ದೇಶನದ ಪುರಾಣ ಪ್ರಹಸನ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲಕರಿಶಂಕರಿ ಅವರು ತಿಳಿಸಿದ್ದಾರೆ.

Leave a Reply

Top