ಸಾಹಿತಿ ಡಾ| ಯು.ಆರ್‌.ಅನಂತಮೂರ್ತಿಯವರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ

ಹೊನ್ನಾವರ:ಯಕ್ಷಗಾನ ಲೋಕದ ಮಹಾನ್‌ ಕಲಾವಿದರಾಗಿದ್ದ ದಿ.ಕೆರೆಮನೆ ಶಿವರಾಮ ಹೆಗಡೆ ಹೆಸರಿನಲ್ಲಿ ಸಾಂಸ್ಕೃತಿಕ-ಸಾಹಿತ್ಯ ಲೋಕದ ಸಾಧಕರಿಗೆ ನೀಡುವ ಶಿವರಾಮ ಹೆಗಡೆ ಪ್ರಶಸ್ತಿ-2011 ಈ ಬಾರಿ ಸಾಹಿತಿ ಡಾ| ಯು.ಆರ್‌.ಅನಂತಮೂರ್ತಿಯವರಿಗೆ ಸಂದಿದೆ.
ಪದ್ಮಭೂಷಣ,ಜ್ಞಾನಪೀಠ ಮೊದಲಾದ ಹಲವು ಪುರಸ್ಕಾರಗಳಿಗೆ ಭಾಜನರಾದ ಅನಂತಮೂರ್ತಿ ಕನ್ನಡದ ನವ್ಯ ಪರಂಪರೆಯ ಮಹತ್ವದ ಲೇಖಕರು.ಸಾಮಾಜಿಕ ಜವಾಬ್ದಾರಿಯನ್ನು ಇಂದಿಗೂ ನಿರ್ವಹಿಸುತ್ತಿರುವ ಅವರು ಗಾಂಧಿ ತತ್ವದ ಪ್ರತಿಪಾದಕ ಸಮಾಜವಾದಿ.
ಹಲವಾರು ಶೈಕ್ಷಣಿಕ ಹುದ್ದೆಗಳನ್ನು ನಿರ್ವಹಿಸಿದ ಅನಂತಮೂರ್ತಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿಗಳಾಗಿದ್ದಾರೆ. ಸಂಸ್ಕಾರ,ಭಾರತಿಪುರ ಮೊದಲಾದ ಮಹತ್ವದ ಹಲವು ಕೃತಿಗಳನ್ನು ಬರೆದಿರುವ ಅವರು,ಜನಪರ ಕಾಳಜಿಯ ಹಳೆಬೇರು,ಹೊಸಚಿಗುರಿನ ಲೇಖಕ.ಶಿವರಾಮ ಹೆಗಡೆ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಂಡಿರುವುದು ಜಿಲ್ಲೆಯ ಕಲಾ ಪ್ರೇಮಿಗಳಿಗೆ ಸಂತಸ ತಂದಿದೆ.
ಕಲಾ ಲೋಕದ ಕಲೆ,ಸಾಂಸ್ಕೃತಿಕ ಲೋಕದ ಗಣ್ಯರಾದ ಶ್ರೀಮತಿ ಮಾಯಾ ರಾವ್‌,ಏಣಗಿ ಬಾಳಪ್ಪ,ಡಾ.ಗಂಗೂಬಾಯಿ ಹಾನಗಲ್‌,ಕೆ.ಎಸ್‌.ನಾರಾಯಣ ಆಚಾರ್ಯ,ಸಂತ ಭದ್ರಗಿರಿ ಅಚ್ಯುತದಾಸ್‌ ಸಹಿತ ಯಕ್ಷಗಾನದ ಗಣ್ಯರಿಗೂ ಸಂದ ಪ್ರಶಸ್ತಿಯನ್ನು 8ನೇ ಬಾರಿ ಅನಂತಮೂರ್ತಿಯವರಿಗೆ ಬರುವ ಜನವರಿ 21ರಿಂದ 25ರವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯುವ ಐದು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟೊಕಕೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.10ಸಾವಿರ ರೂಪಾಯಿ ನಗದು,ತಾಮ್ರ ಪತ್ರವನ್ನು ಒಳಗೊಂಡಿದೆ ಎಂದು ಸಂಚಾಲಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ

Please follow and like us:
error