ಶ್ರೀಗವಿಮಠದ ಮಹಾದಾಸೋಹಕ್ಕೆ ಅಕ್ಕಿ ಬೆಲ್ಲ ದವಸಧಾನ್ಯಗಳ ದೇಣಿಗೆ:

ಶ್ರೀಗವಿಮಠದ ಮಹಾದಾಸೋಹಕ್ಕೆ ಅಕ್ಕಿ ದೇಣಿಗೆ. : 
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀಗವಿಸಿದ್ಧೇಶ್ವರ ಮಹಾಜಾತ್ರೆಯ ಅಂಗವಾಗಿ ೧೧-೦೧-೨೦೧೨   ರಿಂದ  ೨೩-೦೧-೨೦೧೨ ರ ಅಮವಾಸ್ಯೆಯ ತನಕ ನಡೆಯುವ ಮಹಾದಾಸೋಹಕ್ಕಾಗಿ ಕಾರಟಗಿ ಸುತ್ತಮುತ್ತಲಿನ ಗ್ರಾಮದಿಂದ  ೨೫ ಕೆ.ಜಿಯ ೪೧೩ ಪಾಕೇಟು,  ಶ್ರೀ ಸಿ.ಚಂದ್ರಶೇಖರ ನಿರ್ಮಿತಿ ಕೇಂದ್ರ ಇವರು ೨೫ ಕೆ.ಜಿಯ ೪೦೦ ಪಾಕೇಟು, ಶ್ರೀ ಎಂ.ಕೆ. ಮಿಲ್ ಕಾರಟಗಿಯಿಂದ ೨೫ ಕೆ.ಜಿಯ ೧೦೦ ಅಕ್ಕಿಪಾಕೇಟುಗಳು ಶ್ರೀಮಠಕ್ಕೆ ಅರ್ಪಿತವಾಗಿವೆ.
೫ ಕ್ವಿಂಟಾಲ್ ಬೆಲ್ಲ ದೇಣಿಗೆ  :   ಸಂಸ್ಥಾನ ಶ್ರೀ ಗವಿಮಠದ ಶ್ರೀಗವಿಸಿದ್ಧೇಶ್ವರ ಮಹಾಜಾತ್ರೆಯ ಮಹಾದಾಸೋಹಕ್ಕಾಗಿ  ಶ್ರೀಪಾರಿಜಾತ ಹೋಟೆಲ ಮಾಲಕರು ೧  ಕ್ವಿಂಟಾಲ್ ಬೆಲ್ಲ, ಶ್ರೀವಿ.ಜಿ.ಕೊತಬಾಳರು ೧  ಕ್ವಿಂಟಾಲ ಬೆಲ್ಲ, ವೀರಣ್ಣ ಬುಳ್ಳಣ್ಣವರ ೧ ಕ್ವಿಂಟಾಲ್ ಬೆಲ್ಲ, ಡಾ.ಬುಳ್ಳಣ್ಣವರ ೨ ಕ್ವಿಂಟಾಲ್ ಬೆಲ್ಲ ಮತ್ತು ಹೊಸಪೇಟೆ ಬೆಲ್ಲದ ವ್ಯಾಪಾರಿಗಳಿಂದ ೧೦ ಕ್ವಿಂಟಾಲ್ ಬೆಲ ,೨೦ಕೆ.ಜಿ. ಹುಣಸೆಹಣ್ಣು ಹೀಗೆ ಒಟ್ಟು ೫ ಕ್ವಿಂಟಾಲ್ ಬೆಲ್ಲ ಶ್ರೀಮಠಕ್ಕೆ ಅರ್ಪಿತವಾಗಿದೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ದವಸಧಾನ್ಯಗಳ ದೇಣಿಗೆ: ಕುಷ್ಟಗಿ ತಾಲೂಕಾ ತಳವಗೇರಿ ಗ್ರಾಮದ ಭಕ್ತರಿಂದ ೭೦೦೧ ರೊಟ್ಟಿಗಳು, ೨ ಪಾಕೇಟು ಉಳ್ಳಾಗಡ್ಡಿ, ವದಗನಾಳ ಗ್ರಾಮದ ಭಕ್ತರಿಂದ ೧೫೦೦೦ ರೊಟ್ಟಿಗಳು, ಗಿಣಗೇರಿ ಗ್ರಾಮದ ಭಕ್ತರಿಂದ ೪೦೦೦ ರೊಟ್ಟಿಗಳು ಹಾಗೂ ೨೬ ಚೀಲ ದವಸಧಾನ್ಯಗಳು, ಭಾಣಾಪುರ ಗ್ರಾಮದ ಭಕ್ತರಿಂದ ೨೦೦೦ ರೊಟ್ಟಿಗಳು ಹಾಗೂ ೨ ಚೀಲಮೆಕ್ಕೆಜೋಳ, ೪ ಚೀಲ ಜೋಳ, ೩ ಪಾಕೇಟು ಅಕ್ಕಿ, ೩ ಚೀಲ ಉಳ್ಳಾಗಡ್ಡಿ, ಕನಕಗಿರಿಯಿಂದ ೫೦೦೦ ರೊಟ್ಟಿಗಳು, ೪ಚೀಲ ದವಸಧಾನ್ಯಗಳು, ೧ ಚೀಲ ತರಕಾರಿ, ೧ ಚೀಲಮೆಣಸಿನಕಾಯಿ, ೧ ಕ್ವಿಂಟಾಲ್ ಬೆಲ್ಲ, ಸಿದ್ನೆಕೊಪ್ಪ ಗ್ರಾಮದವ ಭಕ್ತರಿಂದ ೪೦೦೦ ರೊಟ್ಟಿಗಳು, ಚಿನ್ನಾಪುರ ಗ್ರಾಮದ ಭಕ್ತರಿಂದ ೧೦ ಚೀಲ ನೆಲ್ಲು, ೧ ಪಾಕೇಟು ಜೋಳ, ಬೂದಗುಂಪಾ ಗ್ರಾಮದ ಭಕ್ತರಿಂದ ೪ ಚೀಲ ನೆಲ್ಲು, ೧ ಚೀಲ ಜೋಳ, ಬೇವೂರು ಗ್ರಾಮದ ಭಕ್ತರಿಂದ ೫೦೦೦ ರೊಟ್ಟಿಗಳು, ೨ ಚೀಲ ದವಸಧಾನ್ಯಗಳು, ಗುಡಗೇರಿ ಗ್ರಾಮದ ಭಕ್ತರಿಂದ ೪೦೦೦ ರೊಟ್ಟಿಗಳು, 
೧ ಟ್ರ್ಯಾಕ್ಟರ್ ಕಟ್ಟಿಗೆ,
 ಹಟ್ಟಿ ಗ್ರಾಮದ ಭಕ್ತರಿಂದ ತರಕಾರಿ ಹಾಗೂ ದಾನ್ಯಗಳ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಮಹಾಪೂರದಂತೆ ದವಸಧಾನ್ಯಗಳು,ತರಕಾರಿಗಳು ಶ್ರೀಮಠಕ್ಕೆ ಕಾಣಿಕೆಯಾಗಿ ಹರಿದು ಬರುತ್ತಿವೆ.ಇಂದು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಭಕ್ತರ ಕಾಣಿಕೆಯು ಅಪೂರ್ವವಾವಾಗಿದೆ. ೨ ಟ್ರ್ಯಾಕ್ಟರ್ ಕುಂಬಳಕಾಯಿ, ೨ ಟ್ರ್ಯಾಕ್ಟರ್ ಟಮ್ಯಾಟೋ, ೬೦೦೦ ರೊಟ್ಟಿಗಳು, ೫೦ ಚೀಲ ದವಸಧಾನ್ಯಗಳು, ೧ ಚೀಲ ಒಣ ಮೆಣಸಿನಕಾಯಿ ಹೀಗೆ ಶ್ರೀ ಗವಿಮಠದ ಜಾತ್ರಾ ದಾಸೋಹಕ್ಕಾಗಿ ವಿಶೇಷ  ಕಾಣಿಕೆಗಳು ಶ್ರೀಮಠಕ್ಕೆ ಅರ್ಪಿತವಾಗಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.  
Please follow and like us:
error