You are here
Home > Koppal News > ಸಾರಿಗೆ ಸಂಸ್ಥೆಯಿಂದ ಅಪಘಾತ ಪರಿಹಾರ ನಿಧಿ ಚೆಕ್ ವಿತರಣೆ

ಸಾರಿಗೆ ಸಂಸ್ಥೆಯಿಂದ ಅಪಘಾತ ಪರಿಹಾರ ನಿಧಿ ಚೆಕ್ ವಿತರಣೆ

  : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಬಸ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿಗೆ ೨. ೪೫ ಲಕ್ಷ ರೂ.ಗಳ ಪರಿಹಾರ ನಿಧಿ ಚೆಕ್ ಅನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ್ ಅವರು ವಿತರಣೆ ಮಾಡಿದರು.
  ಗಂಗಾವತಿ ಘಟಕದ ಕೊಲ್ಲಾಪುರ-ಗಂಗಾವತಿ ಮಾರ್ಗದ ಬಸ್ ಕಳೆದ ೨೦೦೮ ರಲ್ಲಿ ಅಪಘಾತಕ್ಕೀಡಾಗಿ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವದಗನಾಳ ಗ್ರಾಮದ ವಿರುಪಣ್ಣ ಮುಧೋಳ್ ಎಂಬುವವರು ಮೃತಪಟ್ಟಿದ್ದರು.  ಸಾರಿಗೆ ಸಂಸ್ಥೆಯು ಮೃತರ ಪತ್ನಿ ಅನ್ನಪೂರ್ಣ ಎಂಬುವವರಿಗೆ ಅಪಘಾತ ಪರಿಹಾರ ನಿಧಿಯಿಂದ ೨. ೪೫ ಲಕ್ಷ ರೂ.ಗಳ ಚೆಕ್ ಅನ್ನು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾಜ್ ಅವರು ವಿತರಿಸಿದರು.  ವಿಭಾಗೀಯ ಸಂಚಾರ ಅಧಿಕಾರಿ ವಿವೇಕಾನಂದ, ಸಹಾಯಕ ಲೆಕ್ಕಾಧಿಕಾರಿ ಎನ್.ವಿ. ಉಪಾಧ್ಯಾಯ, ಸಹಾಯಕ ಆಡಳಿತಾಧಿಕಾರಿ ವಿನೋದಕುಮಾರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Top