You are here
Home > Koppal News > ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ- ಖಂಡನೆ

ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ- ಖಂಡನೆ

ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ- ಖಂಡನೆ ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ವಿಷಾಧನೀಯ ಸಂಗತಿ. ಈ ಕುರಿತಂತೆ ಪತ್ರಕರ್ತರ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ನಿರಂತರ ಚಳುವಳಿ ನಡೆಸಿದ್ದಾಗಿಯೂ ಕೂಡ ಪತ್ರಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ. ನ್ಯಾಯಸಮ್ಮತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸರಕಾರ ಪೊಲೀಸ್ ಬಲವನ್ನು ಉಪಯೋಗಿಸುತ್ತಿರುವುದು ಖಂಡನೀಯ.ಸರಕಾರ ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರಜಾಪ್ರಬುತ್ವದ ಮೌಲ್ಯಗಳಲ್ಲಿ ನಂಬಿಕೆ ಇದ್ದರೆ ಮೊದಲು ಶಿವಮೊಗ್ಗ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಪತ್ರಕರ್ತರಿಗೆ ರಕ್ಷಣೆ ನೀಡಬೇಕು. ಪತ್ರಕರ್ತರಾದವರು ಕೆಲವಷ್ಟು ವಿಷಯವಾಗಿ ಗೌಪ್ಯತೆಯನ್ನ ಕಾಪಾಡಬೇಕಾಗುತ್ತದೆ. ಈ ಸೂಕ್ಷ್ಮತೆ ಗೊತ್ತಿದ್ದೂ ಪೊಲೀಸ್ ಇಲಾಖೆಯು ಸುದ್ದಿಯ ಮೂಲವನ್ನು ಬಹಿರಂಗ ಪಡಿಸುವಂತೆ ಪ್ರಜಾವಾಣಿಯ ಸುದ್ದಿ ಸಂಪಾದಕರು ಹಾಗೂ ಶಿವಮೊಗ್ಗ ಜಿಲ್ಲಾ ವರದಿಗಾರರಿಗೆ ನೋಟೀಸ್ ನೀಡಿ ದೌರ್ಜನ್ಯಕ್ಕೆ ಮುಂದಾಗಿದ್ದು ಸಂವಿಧಾನ ಬಾಹಿರ. ಸರಕಾರ ಪತ್ರಕರ್ತರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವುದನ್ನು ಬಿಟ್ಟು ಕಾನೂನಿನ ಹೆಸರಿನಲ್ಲಿ ದೌರ್ಜನ್ಯಕ್ಕೆ ಮುಂದಾಗಿರುವುದನ್ನು ತಡೆಗಟ್ಟುವಂತೆ ಕರ್ನಾಟಕ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ ಇಲ್ಲದಿದ್ದಲ್ಲಿ ಪತ್ರಕರ್ತರಿಗೆ ಹೋರಾಟ ಅನಿವಾರ್‍ಯವಾಗುತ್ತದೆ ಎಂದು ಪತ್ರಕರ್ತರಾದ ಬಸವರಾಜ ಶೀಲವಂತರ , ವಿಠ್ಠಪ್ಪ ಗೋರಂಟ್ಲಿ , ಹುಸೇನಪಾಷಾ,ಸಿರಾಜ್ ಬಿಸರಳ್ಳಿ, ಎಸ್.ಎ.ಗಫಾರ್, ಸಂಘಟನೆಯ ಮುಖಂಡರಾದ ಜೆ.ಭರದ್ವಾಜ್,ಗಾಳೆಪ್ಪ ಮುಂಗೋಲಿ,ಹೇಮರಾಜ ವೀರಾಪುರ,ಸೈಯದ್ ಗೌಸ್ ಪಾಷಾ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Top