ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ

ಕೊಪ್ಪಳ : ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಎಚ್.ಗಿರೇಗೌಡರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಿನ್ನೆ ನಡೆಯಿತು. ಹಾಲಪ್ಪ ಆಚಾರರು ಧ್ವಜ ವನ್ನು ಹಸ್ತಾಂತರಿಸಿದರು. ನಂತ ಮಾತನಾಡಿದ ಎಚ್.ಗಿರೇಗೌಡರು ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಪಕ್ಷ ಸಂಘಟಿಸುವುದಾಗಿ ಪಣ ತೊಟ್ಟರು. ಹಿಂದಿನ ಅಧ್ಯಕ್ಷರು ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಅದೇ ಕೆಲಸವನ್ನು ತಾವು ಮುಂದುವರೆಸುವುದಾಗಿ ಹೇಳಿದರು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳೇ ಹೆಚ್ಚು ಆಯ್ಕೆಯಾಗಿದ್ದು, ಇದೇ ಸಾಧನೆಯನ್ನು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಚುನಾವಣೆಯಲ್ಲಿ ತೋರಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಹಾಲಪ್ಪ ಆಚಾರ್, ಲಲಿತಾ ಶ್ರೀರಂಗದೇವರಾಯಲು, ಸಂಸದ ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ, ಅಂದಾನಪ್ಪ ಅಗಡಿ, ಕಳಕಪ್ಪ ಜಾಧವಮ ಡಾ.ಎಂ.ಬಿ.ರಾಂಪೂರ ಪ್ರೇಮಾ ಮುದಗಲ್ ,ಇತರುಉಪಸ್ತಿತರದ್ದರು

Please follow and like us:

Related posts

Leave a Comment