ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ ಆಯ್ಕೆ: ಸರಳ ಸಮ್ಮೇಳನ

ಅಂತೂ ಇಂತೂ ಕೊನೆಗೂ ಗದಗ ಸಮ್ಮೇಳನಕ್ಕೆ ಸಮಯ ಕೂಡಿಬಂದಿದೆ. ಹೈದ್ರಾಬಾದ್ ಕರ್ನಾಟಕದ ದಿಟ್ಟ ಬಂಡಾಯ ಬರಹಗಾರ್ತಿ,ಲೇಖಕಿ ಗೀತಾ ನಾಗಭೂಷಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೆರೆ ಹಾವಳಿ, ಸಮಯ, ಚುನಾವಣೆ ಮುಂತಾದ ಕಾರಣಗಳಿಂದ ಮುಂದೆ ಹೋಗುತ್ತಿದ್ದ ಸಮ್ಮೇಳನ ಕೊನೆಗೂ ಗದಗನಲ್ಲಿ ನಡೆಯುವುದು ಖಚಿತವಾಗಿದೆ. ನಿನ್ನೆ ರಾಜ್ಯ ಕಸಾಪ ಅಧ್ಯಕ್ಷ ನಲ್ಲೂರ ಪ್ರಸಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು ಆದಷ್ಟು ಸರಳವಾಗಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ಬಹಳ ಕಷ್ಟ ನಷ್ಟ ಅನುಭವಿಸಿರುವುದರಿಂದ ವಿಜೃಂಭಣೆಯ ಸಮ್ಮೇಳನ ಮಾಡದೆ ಸರಳವಾಗಿ ಮಾಡಲಾಗುವುದು ಎಂದು ನಲ್ಲೂರ ಪ್ರಸಾದ ತಿಳಿಸಿದ್ದಾರೆ.

Please follow and like us:
error