ಕನ್ನಡ ಪ್ರಭ’ ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ಕೊಪ್ಪಳ ಮೀಡಿಯ ಕ್ಲಬ್ ಖಂಡನೆ

ಮಂಡ್ಯ ಜಿಯ ಮಳವಳ್ಳಿಯಲ್ಲಿ `ಕನ್ನಡ ಪ್ರಭ’ ಪತ್ರಿಕೆಯ ತಾಲ್ಲೂಕು ವರದಿಗಾರ ಉಮೇಶ ಎಂಬುವವರ ಮೇಲೆ ನಡೆದಿರುವ ಹಲ್ಲೆ ಯನ್ನು ಕೊಪ್ಪಳ ಮೀಡಿಯ ಕ್ಲಬ್ ಖಂಡಿಸಿದೆ.
ರಾಜ್ಯ ಸೇರಿದಂತೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಹೆಚ್ಚಾಗುತ್ತಿದೆ. ಅಲ್ಲದೇ, ಮುಂಬೈನಲ್ಲಿ ಮಿಡ್ ಡೆ ಪತ್ರಿಕೆಯ ಹಿರಿಯ ವರದಿಗಾರ ಜ್ಯೋತಿರ್ಮಯಿ ಡೇ ಅವರ ಹತ್ಯೆ ಇನ್ನೂ ಮನದಲ್ಲಿ ಹಸಿರಾಗಿರುವಾಗಲೇ ರಾಜ್ಯದಲ್ಲಿ ಪತ್ರಕರ್ತನೊಬ್ಬನ ಮೇಲೆ ಹ ನಡೆದಿರುವುದು ಆತಂಕಕಾರಿ ವಿಷಯ.ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವಂತಹ ವಾತಾವರಣ ನಿಮಣವಾಗಬೇಕು. ಅಲ್ಲದೇ, ಈ ಘಟನೆಯಲ್ಲಿ ತಪ್ಪಿತಸ್ಥತರನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ಉಪಾಧ್ಯಕ್ಷ ದೊಡ್ಡೇಶ ಯಲಿಗಾರ, ಪ್ರಧಾನ ಕಾರ್ಯದರ್ಶಿ ಭೀಮಸೇನ ಚಳಗೇರಿ, ಪದಾಧಿಕಾರಿಗಳಾದ ಗಂಗಾಧರ ಬಂಡಿಹಾಳ, ಎನ್.ಎನ್.ಮೂರ್ತಿ ಪ್ಯಾಟಿ, ಶ್ರೀಪಾದ ಅಯಚಿತ, ಶರಣು ಹಂಪಿ, ನಾಭಿರಾಜ ದಸ್ತೇನವರ, ಹುಸೇನ್ ಪಾಷಾ ಮತ್ತಿತರರು ಒತ್ತಾಯಿಸ್ದಿದಾರೆ.

Please follow and like us:
error