ಉಪಚುನಾವಣೆ : ಚುನಾವಣಾ ವೀಕ್ಷಕರ ನೇಮಕ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸುವ ಕುರಿತಂತೆ ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನಾಗಿ ಗುಜರಾತ್ ರಾಜ್ಯದಲ್ಲಿ ಆದಾಯ ತೆರಿಗೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಅಗರವಾಲ್ ಐ.ಆರ್.ಎಸ್.  ೮೨೭೭೦೧೮೧೯೦ ಅವರನ್ನು ನೇಮಕ ಮಾಡಿದೆ.
  ಚುನಾವಣಾ ವೀಕ್ಷಕ (ವೆಚ್ಚ) ರಾಜೀವ್ ಅಗರವಾಲ್ ಅವರು ಸೆ. ೩ ರಿಂದಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದು, ಕೊಪ್ಪಳ ನಗರದ ನಿರೀಕ್ಷಣಾ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ.  ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ರಾಜೀವ್ ಅಗರವಾಲ್ ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದ್ದು, ಖುದ್ದಾಗಿ ಸಂಪರ್ಕಿಸಬೇಕಿದ್ದಲ್ಲಿ ಕೊಪ್ಪಳ ನಗರದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿ ಸಂಪರ್ಕಿಸಬಹುದಾಗಿದೆ.  ಚುನಾವಣಾ ವೀಕ್ಷಕರಿಗೆ  (ವೆಚ್ಚ) ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್- ೯೪೮೨೩೮೫೫೭೦ ಅವರನ್ನು ಲೈಜನ್ ಅಧಿಕಾರಿಗಳೆಂದು ನೇಮಿಸಲಾಗಿದ್ದು, ಯಾವುದೇ ದೂರುಗಳಿದ್ದಲ್ಲಿ ಇವರನ್ನು ಸಹ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
Please follow and like us:
error