ಅಂದಪ್ಪ ಮೊರಬಾಳ ಜೆಡಿಎಸ್ ಸೇರ್ಪಡೆ


 
ಕೊಪ್ಪಳ : ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುರುಬ ಸಮಾಜದ ಮುಖಂಡರಾದ ಅಂದಪ್ಪ ಮೊರೆಬಾಳ ಕೊಪ್ಪಳ ಬಿಜೆಪಿಯಿಂದ ಮರಳಿ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಅಂದಪ್ಪ ಮೊರೆಬಾಳ ಜೆಡಿಎಸ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬಸವರಾಜ ಯತ್ನಾಳ, ವೆಂಕಟರಾವ್ ನಾಡಗೌಡ, ಶ್ರೀನಿವಾಸ ಕುಡುತಿನಿ, ಪ್ರದೀಪಗೌಡ ಮಾಲೀಪಾಟೀಲ್ , ಸುರೇಶ ಭೂಮರಡ್ಡಿ, ಚಂದ್ರು ಕವಲೂರು, ವಿರೇಶ ಮಹಾಂತಯ್ಯನಮಠ, ರಮೇಶ ಒಣ ಬಳ್ಳಾರಿ,ಮಂಜುನಾಥ ಗಡ್ಡದ,ಶಂಕರ ಗೆಜ್ಜಿ,ಶರಣಪ್ಪ, ಜಗದೀಶ, ಕೊರ್ಲಳ್ಳಿ ಕೊಟ್ರಪ್ಪ, ಓಜನಹಳ್ಳಿ ಗವಿಸಿದ್ದಪ್ಪ, ಕರಾಟೆ ಮೌನೇಶ, ರಾಜಶೇಖರ ಪುರಾಣಿಕಮಠ,ಗೋಣೇಶ ಉಪ್ಪಾರ ಸೇರಿದಂತೆ ಅಪಾರ ಬೆಂಬಲಿಗರು ಉಪಸ್ಥಿತರಿದ್ದರು.
Please follow and like us:
error