ಸಮ್ಮೇಳನದ ಸಿದ್ದತೆಗಳು…..

ಡಿ. ೯ ರಿಂದ ಗಂಗಾವತಿಯಲ್ಲಿ ಪ್ರಾರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಆತಿಥ್ಯ ನೀಡಲು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಲು ಸಿದ್ಧಪಡಿಸಲಾಗಿರುವ ಅಡುಗೆ ತಯಾರಿಕಾ ಪೆಂಡಾಲ್‌ನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಪೂಜೆ ನೆರವೇರಿಸಿದರು.  ಸಂಸದ ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ, ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಆಹಾರ ಸಮಿತಿ ಅಧ್ಯಕ್ಷ ಕಾಳಪ್ಪ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಡಿ. ೯ ರಿಂದ ಗಂಗಾವತಿಯಲ್ಲಿ ಪ್ರಾರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಆತಿಥ್ಯ ನೀಡಲು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಲು ಸಿದ್ಧಪಡಿಸಲಾಗಿರುವ ಅಡುಗೆ ತಯಾರಿಕಾ ಪೆಂಡಾಲ್‌ನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಅಡುಗೆ ಒಲೆಗೆ ಪೂಜೆ ನೆರವೇರಿಸಿ, ವಿವಿಧ ಭಕ್ಷ್ಯಗಳ ತಯಾರಿಕೆಗೆ ಚಾಲನೆ ನೀಡಿದರು.  ಸಂಸದ ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ, ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಆಹಾರ ಸಮಿತಿ ಅಧ್ಯಕ್ಷ ಕಾಳಪ್ಪ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಡಿ. ೯ ರಿಂದ ಗಂಗಾವತಿಯಲ್ಲಿ ಆರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನಗರದ ಎಪಿಎಂಸಿ ಹಿಂಭಾಗದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯ ಸಿದ್ಧತಾ ಕಾರ್ಯದ ಅಂತಿಮ ಹಂತದ ಪರಿಶೀಲನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ನಡೆಸಿದರು, ಸಂಸದ ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 : ಇದೇ ಡಿ. ೯ ರಿಂದ ಗಂಗಾವತಿಯಲ್ಲಿ ಆರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಮಹಿಳೆಯರು ರಂಗು ರಂಗಿನ ಚಿತ್ತಾರವುಳ್ಳ ರಂಗೋಲಿ ಬಿಡಿಸಿದರು.  ಮಹಿಳಾ ಸಮಿತಿಯ ಅನ್ನಪೂರ್ಣ ಸಿಂಗ್, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮಿ, ಮಹಾಲಕ್ಷ್ಮಿ, ಮುಂತಾದವರು ನಗರದ ಅಂಬೇಡ್ಕರ್ ವೃತ್ತದಲ್ಲಿ ರಂಗೋಲಿ ಹಾಕುವ ಕಾರ್ಯದಲ್ಲಿ ತೊಡಗಿರುವುದು.
ಫೋಟೋ-೭ : ಇದೇ ಡಿ. ೯ ರಿಂದ ಗಂಗಾವತಿಯಲ್ಲಿ ಆರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನಗರದ ಎಪಿಎಂಸಿ ಹಿಂಭಾಗದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಗೆ ಅಂತಿಮ ರೂಪ ನೀಡುವಲ್ಲಿ ಕೆಲಸಗಾರರು ನಿರತರಾಗಿರುವುದು.
Please follow and like us:
error