ಸೈನ್ಯ ಭರ್ತಿ ರ್‍ಯಾಲಿಯಲ್ಲಿ ೬೪೦೦ ಅಭ್ಯರ್ಥಿಗಳು ಭಾಗಿ

 ಜಿಲ್ಲಾ ಕ್ರೀಡಾಂಣದಲ್ಲಿ ಕಳೆದ ಫೆ. ೦೩ ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್‍ಯಾಲಿಯಲ್ಲಿ ಇದುವರೆಗೂ ಒಟ್ಟು ೬೪೦೦ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
  ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಫೆ. ೦೩ ರಿಂದ ಸೇನಾ ಭರ್ತಿ ರ್‍ಯಾಲಿ ನಡೆಯುತ್ತಿದ್ದು, ಫೆ. ೦೩ ರಂದು ೧೪೦೦, ಫೆ. ೪ ರಂದು ೮೦೦, ಫೆ. ೫ ರಂದು ೧೨೦೦ ಹಾಗೂ ಫೆ. ೦೬ ರಂದು ೩೦೦೦ ಸೇರಿದಂತೆ ಇದುವರೆಗೂ ಒಟ್ಟು ೬೪೦೦ ಅಭ್ಯರ್ಥಿಗಳು ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ.  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ನೇಮಕಾತಿ ರ್‍ಯಾಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು.  ಸುಮಾರು ೭೦ ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು ರ್‍ಯಾಲಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಪ್ರತಿ ದಿನ ಬೆಳಿಗ್ಗೆ ೪ ಗಂಟೆಯಿಂದ ರಾತ್ರಿ ೧೧ ರವರೆಗೂ ವಿವಿಧ ಆಯ್ಕೆ ವಿಧಾನದಲ್ಲಿ ಭಾಗವಹಿಸಿದ್ದಾರೆ.  ನೇಮಕಾತಿ ರ್‍ಯಾಲಿಯಲ್ಲಿ ಯಾವುದೇ ತೊಂದರೆಗಳು ಕಂಡುಬಂದಿಲ್ಲ,  ಇಲ್ಲಿನ ಒದಗಿಸಲಾಗಿರುವ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಸುಸೂತ್ರವಾಗಿ ನೇಮಕಾತಿ ರ್‍ಯಾಲಿ ನಡೆಯುತ್ತಿದೆ.  ಫೆಬ್ರುವರಿ ೭ ರಂದು ಗೋಕಾಕ, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಅಭ್ಯರ್ಥಿಗಳು, ಫೆಬ್ರುವರಿ ೮ ರಂದು ಬೈಲಹೊಂಗಲ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಅಭ್ಯರ್ಥಿಗಳು, ಮತ್ತು ಫೆಬ್ರುವರಿ ೯ ರಂದು ಅಥಣಿ, ಹುಕ್ಕೇರಿ ತಾಲೂಕಿನ ಅಭ್ಯರ್ಥಿಗಳು ಹಾಗೂ ಫೆಬ್ರುವರಿ ೧೦ ರಂದು ಮಾಜಿ ಸೈನಿಕರಿಗೆ  ಹಾಗೂ ಎಲ್ಲ ಎನ್.ಸಿ.ಸಿ. ಕ್ರೀಡಾಪಟು ಅಭ್ಯರ್ಥಿಗಳಿಗೆ ರ್‍ಯಾಲಿ ನಡೆಯಲಿದೆ.  ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಎಸ್.ಎಮ್. ತುಕ್ಕರ್ ಅವರು ಸೈನ್ಯ ಭರ್ತಿಯ ಮುಖ್ಯಾಧಿಕಾರಿ ಕರ್ನಲ್ ಕರ್ನಲ್ ವಿಧಾನ್ ಶರಣ್ ಅವರೊಂದಿಗೆ ನೇಮಕಾತಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ರ್‍ಯಾಲಿಯ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರ್‌ನಾಯ್ಕರ್ ಅವರು ತಿಳಿಸಿದ್ದಾರೆ.
Please follow and like us:
error