“ಶ್ರೀಕ್ಷೇತ್ರ ನಗರಗಡ್ಡಿಮಠ” ಚಿತ್ರೀಕರಣಕ್ಕೆ ಪ್ರದೀಪಗೌಡ ಚಾಲನೆ

ಕೊಪ್ಪಳ, ಏ. ೬. ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಆಂಜನೇಯ ಪಿಕ್ಚರ‍್ಸ್ ವತಿಯಿಂದ ಶ್ರೀಕ್ಷೇತ್ರ ನಗರಗಡ್ಡಿಮಠ ಎಂಬ ಕಿರುಚಿತ್ರದ ಚಿತ್ರೀಕರಣ ಬಂಡಿಹರ್ಲಾಪೂರ ಸಮೀಪದ ಸುಕ್ಷೇತ್ರ ನಗರಗಡ್ಡಿಮಠದಲ್ಲಿ ನಡೆಯಿತು.
ಚಿತ್ರೀಕರಣಕ್ಕೆ ಕೊಪ್ಪಳದ ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿಪಾಟೀಲ ಕವಲೂರ ಕ್ಯಾಮರಾ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ನಿರ್ಮಾಣ ಮತ್ತು ನಿರ್ದೇಶನವನ್ನು ಬೆಳ್ಳಿ ಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶೇಖ್ ಇದಾಯತ್ ಮತ್ತು ದುಬೈ ಬಾಬು, ಸಹಾಯಕ ನಿರ್ದೇಶಕರಾಗಿ ರಾಜೀವ್ ಸಿ.ಎನ್. ಮತ್ತು ರಂಗನಾಥ ಕೋಳೂರು ಕಾರ್ಯಮಾಡಿದ್ದು, ವಸ್ತ್ರಾಲಂಕಾರ ಜ್ಯೋತಿ ಎಂ. ಗೊಂಡಬಾಳ, ಪ್ರೊಡಕ್ಷನ್ ಮ್ಯಾನೇಜರ್ ರಾಗಿ ವಿಠ್ಠಲ ಮಾಲಿಪಾಟೀಲ ಮತ್ತು ವಿಜಯಕುಮಾರ ಗೊಂಡಬಾಳ ಕಾರ್ಯನಿರ್ವಹಿಸಿದ್ದಾರೆ.
ಒಂದು ಗಂಟೆಯ ಈ ಚಿತ್ರದಲ್ಲಿ ಹಾಡುಗಳು, ಕ್ಷೇತ್ರ ದರ್ಶನ, ಇತಿಹಾಸ, ಶ್ರೀ ಶಾಂತಲಿಂಗ ಮಹಾಸ್ವಾಮಿಗಳ ಪರಿಚಯ, ಮಠದ ಸಾಮಾಜಿಕ ಕಾರ್ಯಗಳನ್ನು ಪರಿಚಯಿಸಲಾಗುವದು, ಮೇ ತಿಂಗಳಲ್ಲಿ ಒಟ್ಟು ಐದು ಕಿರುಚಿತ್ರಗಳು ಸಿಡಿ ರೂಪದಲ್ಲಿ ಹೊರತರಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಮಠಗಳ ಕಿರುಚಿತ್ರಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
Please follow and like us:
error