ಸರಕಾರದ ಕ್ರಮ ಖಂಡಿಸಿ ಎಸ್.ಎಫ್.ಐ ಪ್ರತಿಭಟನೆ

ಪ್ರತಿಷ್ಠಿತ ಶಾಲೆಗಳ ಪ್ರವೇಶ ಪರೀಕ್ಷೆ ದಿಡೀರ ಮುಂದೂಡಿಕೆ 
ಶಿಕ್ಷಣ ಕ್ಷೇತ್ರದಲ್ಲಿ ಸದಾ ಗೊಂದಲ ಸೃಷ್ಠಿಸುತ್ತಿರುವ ರಾಜ್ಯ ಬಿ.ಜೆ.ಪಿ ಸರಕಾರ ಈಗ ಪ್ರತಿಷ್ಠಿತ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ದಿಡೀರ ರದ್ದು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದೆ. ಸರಕಾರದ ಈ ಕ್ರಮವನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ದಿಡೀರ ಪ್ರತಿಭಟನೆ ನಡೆಸಿತು. 
ನಗರದ ಸ್ವಾಮಿ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಪ್ರತಿಷ್ಠಿತ ಶಾಲೆಗಳ ಪ್ರವೇಶ ಪರೀಕ್ಷೆ ದಿನಾಂಕ ೦೬.೦೫.೧೨ ರಂದು ಬೆಳಗ್ಗೆ ೧೧ ಗಂಟೆಗೆ ನಡೆಯಬೇಕಿತ್ತು. ವಿದ್ಯಾರ್ಥಿಗಳೆಲ್ಲಾ ಪರೀಕ್ಷೆಗಾಗಿ ಸೂಕ್ತ ತಯಾರಿಯೊಂದಿಗೆ ನಗುನಗುತ್ತಾ ಆಗಮಿಸಿದ್ದರು. ಆದರೆ ಪರೀಕ್ಷೆ ಮೂಂದೂಡಲಾಗಿದೆ ಎಂಬ ಸುದ್ದಿ ಅವರನ್ನು ನಿರಾಸೆಗೊಳಿಸಿತು. ಅದರಲ್ಲೂ ದುರಗಮ್ಮ ಎಂಬ ವಿದ್ಯಾರ್ಥಿನಿ ನಾನು ಚೊಲೊ ಓದಿದ್ದೆ. ನಂಗ ಬಾಳ ಬ್ಯಾಸರ ಆಗೈತಿ ಉರಾಗೆಲ್ಲ ಮಂದಿಗೆ ಹೇಳಿ ಬಂದಿದ್ದೆ ಅವರಿಗೆಲ್ಲಾ ನಾ ಎನ್ ಹೇಳಬೇಕು ತಿಳವಲ್ತು ಎಂದು ಅಳುವ ದೃಶ್ಯ ಮನಕಲಕುವಂತಿತ್ತು. 
ಸರಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿರುವುದು ಮತ್ತು ಪರಿಕ್ಷೆಗಳನ್ನು ಕಾರಣವಿಲ್ಲದೆ ಏಕಾಏಕಿ ರದ್ದು ಮಾಡಿರುವುದರ ಹಿಂದೆ ಸರಕಾರ ಮತ್ತು ಖಾಸಗಿ ಶಾಲೆಗಳು ಗುಪ್ತವಾಗಿ ಶ್ಯಾಮಿಲಾದಂತೆ ಕಾಣುತ್ತಿವೆ ಎಂದು ಎಸ್.ಎಫ್,ಐ ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಆರೋಪಿಸುತ್ತಾರೆ. ಪರೀಕ್ಷೆಗಳ ಮುಂದೂಡಲು ಕಾರಣವೇನು ಎಂದು ಎಸ್.ಎಫ್.ಐ ನಾಯಕರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಆಯುಕ್ತರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಕೇಳಿದಾಗ ಸರಕಾರ ಮುಂದೂಡಿ ಎಂದು ಹೇಳಿದೆ ಹಾಗಾಗಿ ಮುಂದುಡಿದ್ದೇವೆ ಎಂದು ಬೇಜವಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 
ಪರಿಕ್ಷೆಗಳನ್ನು ಈ ರಿತಿ ಮುಂದೂಡುವದರಿಂದ ನಮ್ಮ ಸಮಯವನ್ನು ಸರಕಾರ ಹಾಳುಮಾಡುತ್ತಿದೆ. ಮತ್ತು ಚಿಕ್ಕ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ವಿದ್ಯಾರ್ಥಿ ಪಾಲಕರಾದ  ಸೋಮನಾಥ್ ಗಂಗಾವತಿ ಪ್ರಶಿಸಿದರು. ಪ್ರತಿಭಟನೆಯಲ್ಲಿ ಸುಬಾನ್ ಸಯ್ಯದ್, ದೇವರಾಜ್ ನಾಯ್ಕರ್, ವಿದ್ಯಾರ್ಥಿಗಳಾದ ಶಿವಬಸ್ಸಮ್ಮ. ಮಮತಾ ನಾಡಗೇರ್, ಸುಮಲತಾ, ಹನ್ಮಂತಪ್ಪ ಹರಿಜನ, ನಿತೀಶ್ ಕುಮಾರ್, ಗೀರಿಶ್ ಹೊಸಮನಿ, ಯಮನಪ್ಪ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.

Leave a Reply