ಸೂಕ್ಷ್ಮ ಹಾಗೂ ಹನಿ ನೀರಾವರಿ ಪದ್ದತಿ ಕುರಿತು ತರಬೇತಿ

: ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಕೊಪ್ಪಳ, ಕೃಷಿ ಇಲಾಖೆ, ಕೊಪ್ಪಳ ಮತ್ತು ಜೈನ ಇರಿಗೇಶನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ ೦೬-೦೬-೨೦೧೨ ರಂದು ಕೊಪ್ಪಳದ ಹ್ಯಾಟಿ ಗ್ರಾಮದಲ್ಲಿ ಕೃಷಿಯಲ್ಲಿ ನೀರಾವರಿ ಪದ್ಧತಿಗಳನ್ನು ಅಳವಡಿಸಲು ಆಧುನಿಕ ತಂತ್ರಜ್ಞಾನಗಳ ಸೂಕ್ಷ್ಮ ಹಾಗೂ ಹನಿ ನೀರಾವರಿ ಪದ್ದತಿಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
  ತರಬೇತಿಯನ್ನು ಕೊಪ್ಪಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಡಾ: ಮಂಜುಳಾ ಬಸವರೆಡ್ಡಿ ಉದ್ಘಾಟಿಸಿ ರೈತರಿಗೆ ಇಲಾಖೆಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಿತವಾಗಿ ನೀರು ಬಳಸಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಆಧುನಿಕವಾದ ವಿವಿಧ ಹನಿ ನೀರಾವರಿ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಿ ರೈತರಿಗೆ ವಿವಿಧ ಬೆಳೆಗಳಾದ ಬಾಳೆ, ಕಬ್ಬು, ಹತ್ತಿ, ಈರುಳ್ಳಿ, ದಾಳಿಂಬೆ, ನುಗ್ಗೆ ಮತ್ತಿನ್ನಿತರೆ ಬೆಳೆಗಳಲ್ಲಿ ನೀರಾವರಿ ಅಳವಡಿಸಲು ವಿವಿಧ ಮಾದರಿಯ ಸೂಕ್ಷ್ಮ ನೀರಾವರಿ ಪದ್ದತ್ತಿಗಳ ಪರಿಚಯ ಮಾಡಲಾಯಿತು. ಹೆಚ್ಚುತ್ತಿರುವ ಬರಗಾಲ ಮತ್ತು ಮಳೆಯ ಅಭಾವದಲ್ಲಿಯೂ ಸಹ ಕಡಿಮೆ ನೀರಿನ ಲಭ್ಯತೆಯಲ್ಲಿ ಹೆಚ್ಚಿನ ಲಾಭ ಪಡೆಯಲು ವಿಜ್ಞಾನಿಗಳಾದ ಡಾ: ರಾಜಕುಮಾರ ಮತ್ತು ಜೈನ ಸಂಸ್ಥೆಯ ಡಾ: ಗಿರೀಶ ಹಾಲಪ್ಪ ತಿಳಿಸಿದರು. 
  ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ವಿ.ಆರ್. ಜೋಶಿ ರೈತರಿಗೆ ತರಬೇತಿಗಳಿಂದಾಗುವ ಹೊಸ ತಾಂತ್ರಿಕತೆಗಳ ಪರಿಚಯ ಹಾಗೂ ಉಪಯೋಗಗಳ ಬಗ್ಗೆ ತಿಳಿಸಿದರು. ವಿಜ್ಞಾನಿಗಳಾದ ಡಾ:ಮಲ್ಲಿಕಾರ್ಜುನ ಕೆಂಗನಾಳ, ಯುಸೂಫ ಅಲಿ ನಿಂಬರಗಿ ಮತ್ತು ಅಕ್ಕಮಹಾದೇವಿ ಅಗಸಿಮನಿ ವಿವಿಧ ಬೆಳೆಗಳಲ್ಲಿ ಅಳವಡಿಸಬಹುದಾದ ರಸಾವರಿ, ರಸಗೊಬ್ಬರಗಳ ಬಳಕೆ ಮತ್ತು ನೀರಿನೊಂದಿಗೆ ಅಳವಡಿಸಿಕೊಳ್ಳಬಹುದಾದ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ತರಬೇತಿಯಲ್ಲಿ ಕೃಷಿ ಅಧಿಕಾರಿಗಳಾದ ಜೋಶಿ ಮತ್ತು ಅಂಬಣ್ಣ ಪೂಜಾರ ಉಪಸ್ಥಿತರಿದ್ದರು. 
Please follow and like us:
error