ಜಗಜೀವನ್ ರಾಮ್ ಜನ್ಮದಿನ ಆಚರಣೆ

ಕೊಪ್ಪಳ : ಡಾ. ಬಾಬು ಜಗಜೀವನ್ ರಾಂರವರ 103ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರ ಕಾರ್ಯಾಲಯದ ಆವರಣದಿಂದ ಮೆರವಣಿಗೆ ಸಾಹಿತ್ಯಭವನದವರೆಗೆ ನಡೆಯಿತು. ಸಾಹಿತ್ಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸತ್ಯ ಮೂರ್ತಿ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ಜನಾಂಗಕ್ಕೆ ಶಿಕ್ಷಣದಿಂದ ಮಹತ್ತರವಾದ ಬದಲಾವಣೆ ತರಲು ಸಾಧ್ಯ. ಶತಶತಮಾನಗಳಿಂದ ತುಳಿತಕ್ಕೊಳಗಾಗಿರುವ ಜನಾಂಗವು ಎಚ್ಚೆತ್ತುಕೊಳ್ಳಬೇಕಾದರೆ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವ್ನು ಮಾದಿಗ ದಂಡೂರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ನೀಡಿದರು

Related posts

Leave a Comment