ಬಿಜೆಪಿ ಭಿನ್ನಮತ : ಬಂಡಾಯ ತಂಡದಲ್ಲಿ ತಂಗಡಗಿ

ಕೊಪ್ಪಳ : ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಕಾಡಾಟ ಹೆಚ್ಚೇ ಆಗಿದೆ. ಕೆಲದಿನಗಳಿಂದ ಶಾಂತವಾಗಿದ್ದ ಭಿನ್ನಮತ ನಿನ್ನೆ ದಿಡೀರನೇ ಸ್ಪೋಟಗೊಂಡಿದೆ. ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಗಿಟ್ಟಿ ಸಿಕೊಂಡ ಶಿವರಾಜ ತಂಗಡಗಿ ಸಹ ಬಂಡಾಯ ತಂಡದಲ್ಲಿರುವುದು ಜಿಲ್ಲೆಯ ಜನಕ್ಕೆ ಆಶ್ಚರ್ಯವನ್ನುಂಟು ಮಾಡಿದೆ. ಬಿಜೆಪಿ ಸದಸ್ಯರೇ ಇದಕ್ಕೆ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ತಮ್ಮ ವಿವಿದ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಂಡಾಯ ಸಚಿವರು ,ಶಾಸಕರು ಒತ್ತಾಯಿಸುತ್ತಿದ್ದು ಚೆನ್ನೈನ ಹೊಟೆಲ್ ನಲ್ಲಿ ತಂಗಿದ್ದಾರೆ. ಕೆಲವು ಸಚಿವರು, ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ದಿಢೀರನೆ ಪಕ್ಷೇತರ ಸಚಿವರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಹಾಗೂ ಡಿ.ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಶಿಫಾರಸು ಮಾಡಿದ್ದಾರೆ
Please follow and like us:
error