ಭೂಪೇನ್ ಹಝಾರಿಕಾ ನಿಧನ

ಮುಂಬೈ, ನ.5: ಖ್ಯಾತ ಗಾಯಕ, ಸಂಗೀತ ಸಂಯೋಜಕ ಭೂಪೇನ್ ಹಝಾರಿಕಾ  ಸಂಜೆ 4:37ರ ವೇಳೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಡಯಾಲಿಸಿಸ್‌ನೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 86ರ ಹರೆಯದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಝಾರಿಕಾ, ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿಕ ಜೂ.29ರಿಂದ ಆಸ್ಪತ್ರೆಯಲ್ಲಿದ್ದರು. ಅಲ್ಲಿಂದ ಅವರು ಆಸ್ಪತ್ರೆಯ ಹಾಸಿಗೆಗೆ ಅಂಟಿಕೊಂಡಿದ್ದರು. ಸಂಗೀತ-ಗಾಯನ ದಂತಕತೆಯೆನಿಸಿರುವ ಅವರು, ಸ್ವಂತ ಸಂಗೀತದೊಂದಿಗೆ ಗಾಂಧಿ ಟು ಹಿಟ್ಲರ್ ಚಿತ್ರಕ್ಕಾಗಿ ಹಾಡಿದ್ದರು. ಅದರಲ್ಲಿ ಅವರು ಮಹಾತ್ಮಾ ಗಾಂಧಿಯವರ ನೆಚ್ಚಿನ ‘ವೈಷ್ಣವ ಜನ ತೋ’ ಭಜನೆ ಹಾಡಿದ್ದರು.

Leave a Reply