ಸಮ್ಮೇಳನ : ಕಾಲೇಜು ಸಿಬ್ಬಂದಿಗೆ ಅನುಮತಿ ನೀಡಲು ಸೂಚನೆ

ಕೊಪ್ಪಳ : ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವ ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸ್ವ ಇಚ್ಛೆಯಿಂದ ಹಾಜರಾಗಬಯಸುವ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಆಯಾ ಕಾಲೇಜು ಪ್ರಾಂಶುಪಾಲರು ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ಇದೇ ಡಿ. ೦೯, ೧೦ ಹಾಗೂ ೧೧ ರಂದು ಗಂಗಾವತಿಯಲ್ಲಿ ಜರುಗಲಿರುವ ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸ್ವ ಇಚ್ಛೆಯಿಂದ ಹಾಜರಾಗ ಬಯಸುವ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದು, ಸಮ್ಮೇಳನಕ್ಕೆ ಹಾಜರಾದ ಕುರಿತು ಪ್ರಮಾಣ ಪತ್ರವನ್ನು ಆಯಾ ಸಿಬ್ಬಂದಿಯವರು ಪಡೆದು ತರುವಂತೆ ಸೂಚನೆ ನೀಡಿದ್ದಾರೆ.
Please follow and like us:
error