ಶಾಲೆಗಾಗಿ ನಾವು-ನೀವು : ಬೀದಿ ನಾಟಕ ಪ್ರದರ್ಶನ

ಕೊಪ್ಪಳ ಜುಲೈ ೦೫ : ತಾಲೂಕಿನ ಓಜನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆ ಅನುಷ್ಠಾನ ಹಾಗೂ ಗುಣಾತ್ಮಕ ಶಿಕ್ಷಣ, ಸುಭದ್ರ ಸಮಾಜ ನಿರ್ಮಾಣದ ಉದ್ಧೇಶದಿಂದ ರಾಜ್ಯಾಧ್ಯಂತ ಹಮ್ಮಿಕೊಂಡಿರುವ ಶಾಲೆಗಾಗಿ ನಾವು-ನೀವು ಎಂಬ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಓಜನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಕ್ಕಣ್ಣ ಹೊಸಗೇರಿ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಚೇತನ ಸಾಂಸ್ಕೃತಿಕ ಕಲಾ ತಂಡದ ನಾಯಕ ಶಿವಮೂರ್ತಿ ಮೇಟಿ ನಿರ್ದೆಶನದಲ್ಲಿ ಕೂಲಿಯಿಂದ ಶಾಲೆಗೆ, ಜೀತ ಪದ್ದತಿ, ಬಾಲ್ಯವಿವಾಹ, ಮರಳಿ ಬಾ ಶಾಲೆಗೆ, ಮಕ್ಕಳ ಶಿಕ್ಷಣದ ಹಕ್ಕು ಕುರಿತು ಬೀದಿ ನಾಟಕ ಪ್ರದರ್ಶನ ನೀಡಿದರು.
ಗ್ರಾ.ಪಂ. ಸದಸ್ಯರಾದ ಸಂಗಪ್ಪ ಬೀಡನಾಳ, ಹನಮಂತ ಚುಕ್ಕನಕಲ್, ಗ್ರಾಮದ ಮುಖಂಡರಾದ ಹುಚ್ಚಪ್ಪ ಮೋಟಿ, ಶರಣನಗೌಡ ಮಾಲಿಪಾಟೀಲ್, ಮಹಾಲಿಂಗನಗೌಡ ಮಾಲಿಪಾಟೀಲ್, ಡಾ|| ಶರಣಪ್ಪ ಮೇಟಿ, ಗ್ರಾ.ಪಂ. ಕಾರ್ಯದರ್ಶಿ ಸುಮಂಗಲಾ ಗದಗ, ಮೈಲಾರಪ್ಪ ಮುಂದಲಮನಿ, ಹುಲಗಪ್ಪ ಮೋಟಿ, ಶೇಕರಗೌಡ ಮಾ.ಪಾಟೀಲ್, ಮುಖ್ಯ ಶಿಕ್ಷಕ ದೇವಪ್ಪ ಕುಮಟದ, ಶಿಕ್ಷಕರು ಹಾಗೂ ಶಿಕ್ಷಕಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error