ಆಡ್ವಾಣಿ ಯಾತ್ರೆಗೆ ಬಾಂಬಿಟ್ಟವರು ಬೆಂಗಳೂರಿನಲ್ಲಿ?: ಉದ್ಯಾನ ನಗರಿಗೆ ವಿಶೇಷ ತ೦ಡ

ನಿಷೇಧಿತ ಸಂಘಟನೆಯ ಸದಸ್ಯರ ಕೈವಾಡ ಬಯಲು ;
ಮಧುರೆ: ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಅವರ ಯಾತ್ರೆಯ ಮಾರ್ಗದಲ್ಲಿ ಪೈಪ್ ಬಾಂಬ್ ಇರಿಸಿದ್ದ ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಅಡಗಿದ್ದಾರೆಯೇ? ಹೀಗೊಂದು ಸಂಶಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಪೊಲೀಸರಲ್ಲಿ ಮೂಡಿದೆ. ಈ ಅಂಶವನ್ನು ಖಚಿತ ಪಡಿಸಿಕೊಳ್ಳಲು ಉದ್ಯಾನ ನಗರಿಗೆ ವಿಶೇಷ ತಂಡವನ್ನು ಕಳುಹಿಸಲಾಗಿದೆ.
ಇದಲ್ಲದೆ, ಆಂಧ್ರಪ್ರದೇಶದಲ್ಲೂ ಪಾತಕಿಗಳು ಅಡಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಗೂ ವಿಶೇಷ ತಂಡ ಕಳುಹಿಸಲಾಗಿದೆ ಎಂದು ಮದುರೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿ ದ್ದಾರೆ.
ಸಂಚಿನ ರೂವಾರಿಗಳಾದ ‘ಪೊಲೀಸ್’ ಫಕ್ರುದ್ದೀನ್ ಮತ್ತು ಬಿಲಾಲ್ ಮಲಿಕ್ ಎಂಬ ಇಬ್ಬರು ಉಗ್ರರು ‘ಅಲ್-ಉಮ್ಮಾ’ ಸಂಘಟನೆಗೆ ಸೇರಿದವರಾಗಿದ್ದು, ೨೦೦೨ರಲ್ಲಿ ಬೆಂಗಳೂರಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತನಾದ ಇಮಾಮ್ ಅಲಿಯ ಅತ್ಯಂತ ನಿಕಟವರ್ತಿಗಳಾಗಿದ್ದಾರೆ. ಅವರಿಬ್ಬರಿಗಾಗಿ ಬಿರುಸಿನಿಂದ ಶೋಧ ಕಾರ್ಯ ನಡೆಯುತ್ತಿದೆ.
ಚುರುಕಿನ ಸಿದ್ಧತೆ?: ಕಳೆದ ತಿಂಗಳು ಆಡ್ವಾಣಿ ‘ಜನಚೇತನ ಯಾತ್ರೆ’ ಘೋಷಿಸುತ್ತಿದ್ದಂತೆ ಫಕ್ರುದ್ದೀನ್ ಮತ್ತು ಬಿಲಾಲ್ ಮಲಿಕ್ ಬಾಂಬ್ ಇರಿಸುವ ಬಗ್ಗೆ ಸಂಚು ರೂಪಿಸಿದ್ದಾರೆ. ಈ ಉದ್ದೇಶಕ್ಕಾಗಿ ಅವರು ಜಿಲ್ಲೆಯ ಆಲಂಪಟ್ಟಿಯನ್ನು ಆರಿಸಿಕೊಂಡು ಯಾತ್ರೆಯ ಮಾರ್ಗದಲ್ಲಿನ ಸೇತುವೆ ಕೆಳಗೆ ಪೈಪ್ ಬಾಂಬ್ ಇರಿಸಿದ್ದರು.
ಈಗಾಗಲೇ ಇಬ್ಬರ ಬಂಧನ: ಪೊಲೀಸರು ಈಗಾಗಲೇ ನಿವಾಸಿಗಳಾದ ಇಸ್ಮತ್ ಮತ್ತು ಅಬ್ದುಲ್ ರೆಹಮಾನ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಗುರುವಾರ ಉಸ್ಮಾನ್ ಅಲಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಫಕ್ರುದ್ದೀನ್ ಮತ್ತು ಮಲಿಕ್ ಬಾಂಬ್ ಇರಿಸುವ ಬಗ್ಗೆ ಇಸ್ಮತ್ ಮತ್ತು ಅಬ್ದುಲ್ ರಹಮಾನ್ ಅವರ ನೆರವು ಪಡೆದಿದ್ದರು ಎಂದು ವಿಶೇಷ ತನಿಖಾ ತಂಡದ ಅಧಿಕಾರಿ ಗಳು ತಿಳಿಸಿದ್ದಾರೆ.
ಅಸ್ಮತ್ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯಾಗಿದ್ದು, ಆತನೇ ನಾಪತ್ತೆಯಾಗಿರುವ ಇಬ್ಬರಿಗೆ ವಾಹನ ದ ಸೌಲಭ್ಯ ನೀಡಿದ್ದ ಎಂಬ ಮಾಹಿತಿ ಗೊತ್ತಾಗಿದೆ. ನ.೧ರಂದು ಬಂಧನಕ್ಕೆ ಒಳಗಾದ ಇಬ್ಬರು ಯಾವುದೇ ಸಂಘಟನೆಗೆ ಸೇರದೇ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗಲಾರದು ಎಂದು ಉಗ್ರರು ಭಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
-ನಿಷೇಧಿತ ಸಂಘಟನೆಯ ಸದಸ್ಯರ ಕೈವಾಡ ಬಯಲು
ಮದುರೆ : ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಸ್ಥಳದಲ್ಲಿ ಸ್ಫೋಟದ ಸಂಚು ನಡೆಸಿದ್ದ ಪ್ರಕರಣದಲ್ಲಿ ನಿಷೇಧಿತ ಅಲ್-ಉಮ್ಮಾ ಉಗ್ರ ಸಂಘಟನೆಯ ಸದಸ್ಯರಿಬ್ಬರ ಕೈವಾಡ ಇದ್ದು, ಇವರ ಪತ್ತೆಗೆ ವ್ಯಾಪಕ ಶೋಧ ನಡೆಯುತ್ತಿದೆ ಎಂದು ವಿಶೇಷ ತನಿಖಾ ತಂಡ ಇಲ್ಲಿ ತಿಳಿಸಿದೆ.
ಕಳೆದ ತಿಂಗಳು ಅಡ್ವಾಣಿ ಅವರ ರಥಯಾತ್ರೆ ವೇಳಾಪಟ್ಟಿ ಪ್ರಕಟವಾದ ಬಳಿಕ ಫಕ್ರುದ್ದೀನ್ ಹಾಗೂ ಬಿಲಾಲ್ ಮಲಿಕ್ (ಹತ್ಯೆಯಾದ ಉಗ್ರ ಇಮಾಂ ಅಲಿ ಸಹಚರರು) ಇಬ್ಬರೂ ಸೇರಿ ಈ ಸಂಚು ನಡೆಸಿದ್ದರು ಎಂದು ತಂಡ ತಿಳಿಸಿದೆ.
ಇವರು ಒಂದೋ ಬೆಂಗಳೂರಿನಲ್ಲಿ ಅಥವಾ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರಬಹುದು. ಇವರ ಪತ್ತೆಗೆ ಈ ಎರಡೂ ಸ್ಥಳಗಳಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿವೃತ್ತ ಪೊಲೀಸ್ ಕಾನ್ಸ್‌ಟೆಬಲ್ ಮಗ ಫಕ್ರುದ್ದೀನ್ 2002ರಲ್ಲಿ ಒವಮಲೈ ಜಿಲ್ಲೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗ್ದ್ದಿದ. ಈ ಪ್ರಕರಣದಲ್ಲಿ ಇಮಾಂ ಅಲಿಯನ್ನು ಬಂಧಿಸಲಾಗಿತ್ತು. ಪಲಯಂ ಕೊಟ್ಟೈ ಜೈಲಿನಿಂದ ತಪ್ಪಿಸಿಕೊಳ್ಳಲು ಅಲಿಗೆ ಫಕ್ರುದ್ದೀನ್ ನೆರವು ನೀಡಿದ್ದ. ನಂತರ 2002ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಲಿ ಹತ್ಯೆಯಾಗಿದ್ದ.
ಐದು ವರ್ಷಗಳ ಹಿಂದೆ ಹಿಂದೂ ಮಕ್ಕಳ್ ಕಚ್ಚಿ ಮುಖಂಡ ಕಾಳಿದಾಸ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಬಿಲಾಲ್ ಮಲಿಕ್ ಕೂಡ ಒಬ್ಬ. ವೆಲ್ಲೂರು ಕಾರಾಗೃಹದಲ್ಲಿದ್ದಾಗ ಈತ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಈತನ ವಿರುದ್ಧ ದಾಖಲಾಗಿರುವ ಪ್ರಕರಣ ಈಗಲೂ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 27ರಂದು ಇಲ್ಲಿನ ಅಲಂಪಟ್ಟಿ ಗ್ರಾಮದ ಬಳಿ ಅಡ್ವಾಣಿ ಅವರ ಯಾತ್ರೆ ಮಾರ್ಗದಲ್ಲಿ ಶಕ್ತಿಯುತ ಪೈಪ್ ಬಾಂಬ್ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿತ್ತು
Please follow and like us:
error

Related posts

Leave a Comment