ಕಳ್ಳಭಟ್ಟಿ ಸರಾಯಿ ಸಾಗಾಟ : ಆರೋಪಿಗೆ ಜೈಲು ಶಿಕ್ಷೆ

  ಕಳ್ಳಭಟ್ಟಿ ಸರಾಯಿ ಸಾಗಾಣಿಕೆ  ಆರೋಪಿಯೊಬ್ಬಳಿಗೆ ಕೊಪ್ಪಳದ ಸಿಜೆಎಂ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ೨೧೫೦೦ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
  ಬಾಗಲಕೋಟೆ ಜಿಲ್ಲೆ ಚಿಕ್ಕಕೊಡಗಲಿ ತಾಂಡಾದ ಶಾಂತವ್ವ ಗಂಡ ಶೇಖಪ್ಪ ರಾಠೋಡ್ ಎಂಬ ಮಹಿಳೆಯೇ ಶಿಕ್ಷೆಗೆ ಒಳಗಾದ ಆರೋಪಿ.  ಈಕೆ ಕಳೆದ ೨೦೧೧ ರ ಫೆಬ್ರವರಿ ೦೮ ರಂದು ರಾತ್ರಿ ಕುಷ್ಟಗಿ ತಾಲೂಕಿನ ಮಲಕಾಪುರ ಕ್ರಾಸ್‌ನಲ್ಲಿ  ಕಳ್ಳಭಟ್ಟಿ ಸರಾಯಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ಪೊಲೀಸ್   ಇನ್ಸ್‌ಪೆಕ್ಟರ್ ಬಿ.ಬಿ. ಪಾಟೀಲ್ ಅವರು ದಾಳಿ ನಡೆಸಿ, ಶಾಂತವ್ವ ರಾಠೋಡ್ ಎಂಬಾಕೆಯನ್ನು ಬಂಧಿಸಿದ್ದರು.  ಅಲ್ಲದೆ ಆರೋಪಿಯ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಧೀಶ ಕೆ. ಶಿವರಾಮ ಅವರು ಆರೋಪಿ ಮೇಲಿನ ಆರೋಪವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿ ಶಾಂತವ್ವ ಗಂಡ ಶೇಖಪ್ಪ ರಾಠೋಡಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ೨೧೫೦೦ ರೂ.ಗಳ ದಂಡಿ ವಿಧಿಸಿ ಆದೇಸಿದ್ದಾರೆ.  ಸರ್ಕಾರದ ಪರ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಎ. ಪಾಟೀಲ್ ಅವರು ವಾದಿಸಿದ್ದರು.
Please follow and like us:
error