ಯುವ ಗಾಯಕ ಸಂತೋಷ ಕುಮಾರ ನಿಧನಕ್ಕೆ ಭರಣಿ ವೇದಿಕೆ ಕಂಬನಿ


ಬಳ್ಳಾರಿ, ಆ. ೪:ನಗರದ ಸಂಸ್ಕೃತಿ ಕಲಾ ಬಳಗದ ಅಧ್ಯಕ್ಷ, ಉದಯೋನ್ಮುಖ ಗಾಯಕ ಸಂತೋಷ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ, ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘ ಕಂಬನಿ ಮಿಡಿದಿವೆ.ನಗರದಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಸಂತೋಷ ಕುಮಾರ್ ತಮ್ಮ ಮಧುರ ಕಂಠದಿಂದ ಸುಶ್ರಾವ್ಯ ಭಾವ ಗೀತೆ, ಜನಪದ, ಚಲನ ಚಿತ್ರ ಗೀತೆಗಳನ್ನು ಹಾಡಿ ಸಂಗೀತ ಪ್ರಿಯರನ್ನು ಮುದಗೊಳಿಸುತ್ತಿದ್ದರು ಎಂದು ವೇದಿಕೆ ಅಧ್ಯಕ್ಷ, ಪತ್ರಕರ್ತ ಸಿ. ಮಂಜುನಾಥ್, ಶ್ರೀ ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು
ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಜನಪದ ಕಲಾವಿದ ಬೆಳಗಲ್ ವೀರಣ್ಣ, ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು, ಶಬರಿ ಕೆ. ರಾಜಗೋಪಾಲ (ಸ್ವಾಮಿ), ಕರ್ನಾಟಕ ಜಾನಪದ ಪರಿಷತ್ತಿನ ಬಳ್ಳಾರಿ ತಾಲೂಕು ಘಟಕದ ಸದಸ್ಯ ಶಬರಿ ಕೃಷ್ಣ, ಚಿತ್ರ ಕಲಾವಿದ ಮಂಜುನಾಥ್ ಗೋವಿಂದವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ ಕೊಟ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಭರಣಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ಸ್ನೇಹ ಕಲಾ ಕೇಂದ್ರದ ಅಧ್ಯಕ್ಷ ಕಲ್ಕಂಬ ಪಂಪಾಪತಿ ಮತ್ತಿತ್ತರ ಸಾಂಸ್ಕೃತಿಕ ಲೋಕದ ಗ

Leave a Reply