ಡಾ.ಧನಂಜಯ ಕುಂಬ್ಳೆಗೆ ‘ಮುದ್ದಣ ಕಾವ್ಯ’ ಪ್ರಶಸ್ತಿ

 ಮೂಡಬಿದ್ರೆ,ಅ.29:ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ 2011ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಕವಿ ಹಾಗೂ ಲೇಖಕರಾಗಿರುವ ಡಾ.ಧನಂಜಯ ಕುಂಬ್ಳೆಯವರ ‘ಹಣತೆ ಹಾಡು’ಎಂಬ ಕವನಸಂಕಲನ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆಯವರು ಪ್ರಕಟಿಸಿದ್ದಾರೆ.
ಪ್ರಸಿದ್ಧ ಸಾಹಿತಿ ಡಾ.ಜಿ.ಎಂ.ಹೆಗ್ಡೆ,ಧಾರವಾಡ ಮತ್ತು ಈಗಾಗಲೇ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಪಡೆದಿರುವ ಡಾ.ರಾಧಾಕೃಷ್ಣ ಬೆಳ್ಳೂರು,ಕಾಸರಗೋಡು ಹಾಗೂ ಸುಬ್ಬು ಹೊಲೆಯಾರ್ ಬೆಂಗಳೂರು ಅವರು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರ ರೂ.ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ.ಪ್ರಶಸ್ತಿ ಪ್ರದಾನ ಸಮಾರಂಭ 2012ರ ಜನವರಿ 26ರಂದು ಕಾಂತಾವರದ ಕನ್ನಡಭವನದಲ್ಲಿ ನಡೆಯಲಿದೆ.

Leave a Reply