You are here
Home > Koppal News > ರಾಜ್ಯಮಟ್ಟದ ವಿಚಾರ ಸಂಕಿರಣ.

ರಾಜ್ಯಮಟ್ಟದ ವಿಚಾರ ಸಂಕಿರಣ.

 ಕೊಪ್ಪಳ:ನಗರದ ಶ್ರೀಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ  ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ  ಕನ್ನಡ ವಿಭಾಗದಿಂದ  ದಲಿತ ಬಂಡಾಯ ಸಾಹಿತ್ಯದ ಸ್ವರೂಪ ಎಂಬ ವಿಷಯದ ಅಡಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ ೦೪-೦೩-೨೦೧೨ ರಂದು ರವಿವಾರ  ಹಮ್ಮಿಕೊಳಲಾಗಿದೆ.  ಮುಂಜಾನೆ ೧೦ ಗಂಟೆಗೆ ಉದ್ಘಾಟನೆಯನ್ನು ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ   ಎಂ.ವಿ.ಪಾಟೀಲ ಮಾಡಲಿದ್ದಾರೆ.  ಪ್ರಧಾನ ಭಾಷಣವನ್ನು ಡಾ.ಬಿ.ಎಂ.ಪುಟ್ಟಯ್ಯ ಪ್ರಾಧ್ಯಾಪಕರು ಕನ್ನಡ.ವಿ.ವಿ ಹಂಪಿ ಇವರು ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಪ್ರೊ.ಎಸ್.ಎಲ್.ಮಾಲಿಪಾಟೀಲ ವಹಿಸುವರು. ಪ್ರಮುಖ ಗೋಷ್ಠಿಗಳಲ್ಲಿ ಡಾ.ಅಪ್ಪಗೆರೆ ಸೋಮಶೇಖರ ಅವರಿಂದ ದಲಿತ ಬಂಡಾಯ ಸಾಹಿತ್ಯದ ಸ್ವರೂಪ ಮತ್ತು ಪರಂಪರೆ ಹಾಗೂ ಡಾ.ಎಸ್.ನರೇಂದ್ರಕುಮಾರ ಅವರಿಂದ ದಲಿತ ಮತ್ತು ಬಂಡಾಯ ಸಾಹಿತ್ಯದಲ್ಲಿ ಹೊಸ ಸಂವೇದನೆಗಳು ಎಂಬ ಉಪನ್ಯಾಸಗಳು ಹಾಗೂ ಡಾ.ಜಾ.ಜಿ. ದೇವೆಂದ್ರಪ್ಪ ಅವರಿಂದ  ಕನ್ನಡ ಹಾಗೂ ತೆಲುಗು ದಲಿತ ಕಾವ್ಯದ ಸ್ವರೂಪ ಮತ್ತು ಸಾಧ್ಯತೆ  ಹಾಗೂ ಡಾ.ಮಲ್ಲೇಶ  ಚಲವಾದಿ ಅವರಿಂದ ಹೈದರಾಬಾದ್ ಕರ್ನಾಟಕದ ದಲಿತ ಸಾಹಿತ್ಯ ಈ ವಿಷಯಗಳ ಪತ್ರಿಕಾ ಮಂಡನೆಗಳು ಇರುತ್ತವೆ. ವಿವಿಧ ಗೋಷ್ಠಗಳಲ್ಲಿ ಡಾ.ಅರ್ಜುನಗೊಳಸಂಗಿ, ಡಾ.ಅಮರೇಶನುಗಡೋಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಭೆಯಲ್ಲಿ ವಿಜಯನಗರ ಕೃಷ್ಣದೇವರಾಯ ವಿ.ವಿ ಕುಲಸಚಿವರಾದ ಡಾ.ರಂಗರಾಜ ವನದುರ್ಗಾ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅನೇಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರಣ ಜಿಲ್ಲೆಯಾಧ್ಯಂತ ಆಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕನ್ನಡ ವಿಭಾಗದಿಂದ ಡಾ.ಬಸವರಾಜಪೂಜಾರ,ಡಾ.ಪಾರ್ವತಿ ಪೂಜಾರ,ಡಾ.ಸಿದ್ದಲಿಂಗಪ್ಪ,, ಡಾ ಪ್ರಕಾಶಬಳ್ಳಾರಿ ಪತ್ರಿಕಾಪ್ರಕಟಣೆ ಮೂಲಕ ಕೋರಿದ್ದಾರೆ. 

Leave a Reply

Top