ಶ್ರೀಮತಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನ : ಪ್ರಶಸ್ತಿಗಳ ಘೋಷಣೆ

ಪ್ರಶಸ್ತಿಗಳ ಘೋಷಣೆ
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬೆಟ್ಟದೂರು ಗ್ರಾಮದ ಅಮರಮ್ಮ ಚೆನ್ನಬಸವಪ್ಪ ದಂಪತಿ ರೈತ ಕುಟುಂಬಕ್ಕೆ ಸೇರಿದವರು. ಚೆನ್ನಬಸವಪ್ಪನವರು ರೈತ ಹೋರಾಟಗಾರರೂ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರೂ, ವಚನ ಸಾಹಿತ್ಯ, ವಿಚಾರ ಸಾಹಿತ್ಯ ಸೃಷ್ಟಿಸಿದವರೂ ಆಗಿದ್ದಾರೆ. ಈ ದಂಪತಿ ಹೆಸರಿನಲ್ಲಿ ಪ್ರತಿ ವರ್ಷ ವಚನ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯಕ್ಕೆ ಪ್ರಶಸ್ತಿ ನೀಡುವ ಪರಿಪಾಠವನ್ನು ಹಾಕಿಕೊಂಡು ಬಂದಿದೆ. 
೨೦೧೦ರ ಸಾಲಿನಲ್ಲಿ ೧೮ ಪುಸ್ತಕಗಳು ನಾಡಿನ ನಾನಾ ಭಾಗಗಳಿಂದ ಸ್ಪರ್ಧೆಗೆ ಬಂದಿದ್ದವು. ಆಯ್ಕೆ ಸಮಿತಿಯು ಡಾ.ಚೆನ್ನಕ್ಕ ಪಾವಟೆಯವರ ’ವಚನ ಸಂಗಮ’ ಡಾ. ಗಂಗಮ್ಮ ಸತ್ಯಂಪೇಟೆಯವರ ’ಉಕ್ಕಿನ ಮಹಿಳೆ’ ಸ.ರಾ.ಸುಳಕೂಡೆ  ಅವರ ’ಅಂತರಂಗದ ಅನ್ವೇಷಣೆ’ ಕೃತಿಗಳನ್ನು ಆಯ್ಕೆ ಮಾಡಿದೆ.
ಮಾನ್ವಿಯಲ್ಲಿ ಚೆನ್ನಬಸವಪ್ಪ ಬೆಟ್ಟದೂರು ಅವರ ಸ್ಮರಣೆಯ ಕಾರ‍್ಯಕ್ರಮ ಜೂನ ೧೩, ೨೦೧೨ರಂದು ನಡೆಯಲಿದ್ದು ಆಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.
———————————————————
ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ
ಶ್ರೀಮತಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನವು ೨೦೧೧ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯದ ವಿಶ್ಲೇಷಣಾತ್ಮಕ ಕೃತಿಗಳನ್ನು ಆಹ್ವಾನಿಸಿದೆ.
ಏಪ್ರಿಲ್ ೩೦,೨೦೧೨ರೊಳಗಾಗಿ ೨೦೧೧ರಲ್ಲಿ ಮಾತ್ರ ಪ್ರಕಟಿತವಾದ ಕೃತಿಗಳ ೩ ಪ್ರತಿಗಳನ್ನು ಅಲ್ಲಮಪ್ರಭು ಬೆಟ್ಟದೂರು, ಅಮರಚೇತನ,ಕಲ್ಯಾಣ ನಗರ,ಕಿನ್ನಾಳ ರಸ್ತೆ,ಕೊಪ್ಪಳ-೫೮೩ ೨೩೧. ಇಲ್ಲಿಗೆ ಕಳಿಸಲು ಕೋರಿದೆ. ಮೊಬೈಲ್ ಸಂಖ್ಯೆ : ೯೮೪೪೦೪೯೨೦೫ಗೆ ಸಂಪರ್ಕಿಸಬಹುದು.
Please follow and like us:
error