ಡಾ|| ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ ೨೦೧೦


ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಂಗತ್ಯ ಪ್ರಕಾಶನ ಖ್ಯಾತ ಕವಿ, ಅನುವಾದಕ, ನಾಟಕಕಾರ, ವಿಮರ್ಷಕ ಡಾ|| ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರವನ್ನು ೨೦೧೦ ರಿಂದ ನೀಡುವುದಾಗಿ ತಿರ್ಮಾನಿಸಿತ್ತು. ಅದಕ್ಕಾಗಿ ೨೦೦೫ ರಿಂದ ೨೦೦೯ ರವರೆಗೆ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕಿ ನೂರಾ ಇಪ್ಪತ್ತೈದು ಕವಿಗಳು ಹಾಗೂ ಪ್ರಕಾಶಕರು ಸಂಕಲನಗಳನ್ನು ಸಾದರ ಪಡಿಸಿದ್ದರು. ಖ್ಯಾತ ಕವಿಗಳಾದ ಮೈಸೂರಿನ ಜಿ.ಕೆ.ರವೀಂದ್ರಕುಮಾರ, ಹಾವೇರಿಯ ಸತೀಷ ಕುಲಕರ್ಣಿ ಹಾಗೂ ಬೆಂಗಳೂರಿನ ಎಚ್. ಎಲ್. ಪುಷ್ಪಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಅಂತಿಮವಾಗಿ ಹರಿಹರದ ಖ್ಯಾತ ಬಂಡಾಯ ಕವಿಯತ್ರಿ ಕೆ.ಶರೀಫಾ ಅವರ ಬುರ್ಖಾ ಪ್ಯಾರಡೈಸ್ ಮೈಸೂರಿನ ಸೃಜನಶೀಲ ಕಲಾವಿದ, ಕವಿ ಮಂಜುನಾಥ ಲತಾ ಅವರ ಆಹಾ ಅನಿಮಿಷ ಕಾಲ ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತು. ಪ್ರಶಸ್ತಿಗೆ ಹತ್ತು ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು. ಪ್ರಥಮ ವರ್ಷದ ಪುರಸ್ಕಾರವನ್ನು ಇಬ್ಬರೂ ಹಂಚಿಕೊಂಡಿದ್ದು ಪುರಸ್ಕೃತರಿಗೆ ತಲಾ ಐದು ಸಾವಿರ ನಗದು ಹಾಗೂ ಸ್ಮರಣೆಗಳನ್ನು ನೀಡಿ ಗೌರವಿಸಲಾಗುವುದೆಂದು ಸಾಂಗತ್ಯ ಪ್ರಕಾಶನದ ಸಂಚಾಲಕರಾದ ಡಾ|| ಜಿ. ಬಿ. ಪಾಟೀಲ ಹಾಗೂ ಸಿದ್ಧು ಯಾಪಲಪರವಿ ತಿಳಿಸಿದ್ದಾರೆ

Please follow and like us:
error