ಆಪರೇಷನ್ ಕಮಲಕ್ಕೆ ಸಂಗಣ್ಣ ಬಲಿ

ಕೊಪ್ಪಳದ ಶಾಸಕ ಜೆಡಿಎಸ್ ನಿಂದ ಚುನಾಯಿತರಾಗಿದ್ದ ಸಂಗಣ್ಣ ಕರಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಪರೇಷನ್ ಕಮಲಕ್ಕೆ ಸಂಗಣ್ಣ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಾಳಯಕ್ಕೆ ಸೇರುವುದು ಖಚಿತವಾಗಿದ್ದು ಅವರಿಗೆ ಸಚಿವಗಿರಿ ಅಥವಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಆಮೀಷ ನೀಡಲಾಗಿದೆ ಎನ್ನಲಾಗುತ್ತಿದೆ.ಇತ್ತೀಚಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗಳಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದ್ದ ಸಂಗಣ್ಣ ಕರಡಿ ತಮ್ಮ ರಾಜಕೀಯ ಜೀವನದ ಉಳಿವಿಗಾಗಿ ಬಿಜೆಪಿ ಸೇರಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಒಮ್ಮೆ ಬಿಜೆಪಿ ಸೇರಿ ಅಲ್ಲಿಂದ ವಿಧಾನಸಭೆ ಸ್ಪರ್ಧಿಸಿ ಸೋಲನ್ನಪ್ಪಿದ್ದ ಸಂಗಣ್ಣ ಈ ಸಲ ಮತ್ತೊಮ್ಮೆ ತಮ್ಮ ಅದೃಷ್ಟಪರೀಕ್ಶೆಗೆಸಿದ್ದವಾಗಿದ್ದಾರೆ

Leave a Reply