ಕೊಪ್ಪಳ ವಿಭಾಗದಿಂದ ೦೭ ಮಾರ್ಗಗಳಿಗೆ ಬಸ್ ಪ್ರಾರಂಭ

ಕೊಪ್ಪಳ ಮೇ. : ಪ್ರಯಾಣಿಕರಿಗೆ ಹೆಚ್ಚಿನ ಹಾಗೂ ಉತ್ತಮ ಸಾರಿಗೆ ಸೌಕರ್ಯ ಒದಗಿಸುವ ಉದ್ದೇಶದಿಂದ ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗವು ೦೭ ಮಾರ್ಗಗಳಿಗೆ ನೂತನವಾಗಿ ಬಸ್ ಸಂಚಾರ ಪ್ರಾರಂಭಿಸಿದೆ.
ಕೊಪ್ಪಳ ವಿಭಾಗವು ಹೊಸ ವಾಹನಗಳೊಂದಿಗೆ ಪ್ರಾರಂಭಿಸಲಾಗಿರುವ ಬಸ್ ಸಂಚಾರ ಮಾರ್ಗಗಳ ವಿವರ ಇಂತಿದೆ. ಕೊಪ್ಪಳ-ಬೆಂಗಳೂರು, ಕೊಪ್ಪಳ- ಹೈದ್ರಾಬಾದ್, ಗಂಗಾವತಿ- ಹೈದ್ರಾಬಾದ್, ಗಂಗಾವತಿ- ಬೆಂಗಳೂರು, ಯಲಬುರ್ಗಾ- ಬೆಂಗಳೂರು, ಕುಷ್ಟಗಿ-ಧರ್ಮಸ್ಥಳ ಹಾಗೂ ಕುಷ್ಟಗಿ- ಬೆಂಗಳೂರು. ಸಾರ್ವಜನಿಕರು ಹೊಸದಾಗಿ ಪ್ರಾರಂಭಿಸಿರುವ ಮಾರ್ಗಗಳ ಬಸ್ ಸೌಕರ್ಯದ ಸದುಪಯೋಗ ಪಡೆದುಕೊಳ್ಳುವಂತೆ ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಂಕರ ಪಾಟೀಲ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Please follow and like us:
error