ಮಹಿಳೆ ಕೊಲೆಗೆ ಯತ್ನಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ

ಕೊಪ್ಪಳ ಆ. : ಯಲಬುರ್ಗಾ ಪಟ್ಟಣ ನಿವಾಸಿ ಫಕ್ರುಸಾಬ ಕುಕನೂರು ಎಂಬಾತ ತನ್ನ ಮನೆಯಲ್ಲಿ ಎರಡನೆ ಹೆಂಡತಿಯನ್ನು ಇರಿಸಿಕೊಳ್ಳುವ ಉದ್ದೇಶದಿಂದ, ಇತರೆ ಮೂವರ ಸಹಾಯದಿಂದ, ಮೊದಲನೆ ಹೆಂಡತಿಯನ್ನು ಕೊಲೆ ಮಾಡಲು ಯತ್ನಿಸಿದ ಕಾರಣಕ್ಕಾಗಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ಒಟ್ಟು ನಾಲ್ವರು ಆರೋಪಿಗಳಿಗೆ ೪ ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ೪೦೦೦ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಯಲಬುರ್ಗಾ ಪಟ್ಟಣದ ನಿವಾಸಿಗಳಾದ ಅಜ್ಮೀರಸಾಬ ಕುಕನೂರ, ರಮಜಾನಭಿ ಕುಕನೂರ, ಫಕ್ರುಸಾಬ ಕುಕನೂರ ಹಾಗೂ ರಾಜೇಶ್ವರಿ ಕುಕನೂರ ಎಂಬ ನಾಲ್ವರು ಫಕ್ರುಸಾಬ್‌ನ ಎರಡನೆ ಹೆಂಡತಿಯನ್ನು ಆತನ ಮನೆಯಲ್ಲಿರಿಸಿಕೊಳ್ಳುವ ಸಲುವಾಗಿ ಮೊದಲನೆ ಹೆಂಡತಿ ರಜಿಮಾಬೇಗಂಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ. ಅಲ್ಲದೆ ಕಳೆದ ೨೦೦೯ ರ ಅಕ್ಟೋಬರ್ ೨೫ ರಂದು ರಾತ್ರಿ ರಜಿಮಾಬೇಗಂಳನ್ನು ಕೊಲೆ ಮಾಡುವ ಉದ್ದೇಶದಿಂದ ಹೇನಿನ ಪುಡಿಯನ್ನು ನೀರಿನಲ್ಲಿ ಕಲಿಸಿ, ಕುಡಿಸಿ, ಕೊಲೆ ಮಾಡಲು ಯತ್ನಿಸಿದ್ದರು. ಯಲಬುರ್ಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪಿ.ಎಸ್.ಐ. ಎಚ್.ಎಸ್. ನಡುಗಡ್ಡಿ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಎಸ್. ಮಾಳಗಿ ಅವರು ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ನಾಲ್ವರು ಆರೋಪಿಗಳಿಗೆ ಗೆ ೪ ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ೪೦೦೦ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಐ.ಬಿ. ಚೌಧರಿ ಅವರು ಸರ್ಕಾರದ ಪರ ವಾದಿಸಿದ್ದರು

Related posts

Leave a Comment