ಶ್ರೀ ಭಗೀರಥ ಉಪ್ಪಾರ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ,ಜು.೦೨: ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ರವಿವಾರದಂದು ಬೆಳಿಗ್ಗೆ ೧೧.೦೦ ಗಂಟೆಗೆ ಕೊಪ್ಪಳ ತಾಲೂಕ ಶ್ರೀ ಭಗೀರಥ ಉಪ್ಪಾರ ಸಮಾಜದ ಸಭೆಯಲ್ಲಿ ಕೊಪ್ಪಳ ತಾಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವೆಂಕನಗೌಡ ಪಾಟೀಲ್‌ರ ವಹಿಸಿದ್ದರು. ಸಮಾಜದ ಮುಖಂಡರಾದ ಮರ್ದಾನಪ್ಪ ಬಿಸನಳ್ಳಿ, ರಾಮಣ್ಣ ಅಂಗಡಿ, ಗೋಣೇಶಪ್ಪ ಉಪ್ಪಾರ, ಯಂಕಪ್ಪ ಕ್ಯಾಶಪ್ಪನವರ, ನಾಗರಾಜ ಚಳ್ಳೋಳ್ಳಿ ಇವರ ನೇತೃತ್ವದಲ್ಲಿ ಸಮಾಜಕ್ಕೆ ತಾಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಬಸವರಾಜ ಮೂಲಿಮನಿ, ಅಧ್ಯಕ್ಷರಾಗಿ ಕನಕಪ್ಪ ಮುಂಡರಗಿ ಚಿಕ್ಕಬಗನಾಳ, ಉಪಾಧ್ಯಕ್ಷರಾಗಿ ಬಸವರಾಜ ವಾಯ್.ಹಿಟ್ನಾಳ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಬಿ.ಗೌಡೂರು ವಕೀಲರು, ಖಜಾಂಚಿಯಾಗಿ ವಿರುಪಾಕ್ಷಪ್ಪ ಬಿಸನಳ್ಳಿ, ಕಾರ್ಯದರ್ಶಿಯಾಗಿ ಶಿವಪ್ಪ ಕಲ್ಗೋಡಿ, ಕಾನೂನು ಸಲಹೆಗಾರರಾಗಿ ಶರಣಪ್ಪ ಎಚ್.ಇಟಗಿ ವಕೀಲರು, ಸದಸ್ಯರಾಗಿ ಪಿಚ್ಚಹನುಮಪ್ಪ ಕೊಕೆಪ್ಪನವರ, ತಿಮ್ಮಣ್ಣ ಸಿದ್ನೆಕೊಪ್ಪ, ಶರಣಪ್ಪ ಸಿಂಧೋಗಿ, ಮಂಜುನಾಥ ಪಾಟೀಲ್, ಡಾ.ಮಲ್ಲೇಶ ಕಂಪಸಾಗರ, ಎನ್.ಎಂ.ರಡ್ಡಿ, ರಾಮನಗೌಡ ಚಾಮಲಾಪುರ, ಯಮನೂರಪ್ಪ ಕಟಗಿ, ಯಮನಗೌಡ ಟಿ.ಪೋ.ಪಾ, ಬನ್ನೆಪ್ಪ ಪೋಟಿ, ಪರಸಪ್ಪ ಗಡಗಿ, ಹನುಮೇಶ ಬಂಡಿಹರ್ಲಾಪೂರ, ಹನುಮಂತಪ್ಪ ಹೊನ್ಮುಣಜಿ, ಲಕ್ಷ್ಮಣ್ಣ ದೊಡ್ಡಮನಿ, ದೇವಪ್ಪ ಬುರುಡಿ, ರಾಮಣ್ಣ ಜಿನ್ನಾಪೂರ, ಶ್ರೀನಿವಾಸ ಕಾಶಪ್ಪನವರ, ರಾಮಣ್ಣ ಕನಕಾಪೂರ, ದೇವಪ್ಪ ಕೋರಿ, ಶಂಕ್ರಪ್ಪ ರಾಜೂರು, ಸಿದ್ದಲಿಂಗಪ್ಪ ಚಂಡೂರು, ಆನಂದ ಉಪ್ಪಾರ, ಗೋವಿಂದಪ್ಪ ಹೊಸೂರು, ಗವಿಸಿದ್ದಪ್ಪ ಚಂಡೂರು, ಶ್ರೀಮತಿ ಪಾರ್ವತೆಮ್ಮ ಉಪ್ಪಾರ, ರಮೇಶ ದದೇಗಲ್, ಆನಂದ ಹೊಸಳ್ಳಿ, ಶರಣಪ್ಪ ಸಂಗನಾಳ ಇವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಲಾಯಿತು.ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕನಕಪ್ಪ ಮುಂಡರಗಿ ಇವರಿಗೆ ಸಮಾಜದ ಮುಖಂಡರು ಸನ್ಮಾನಿಸಿದರು.  

Related posts

Leave a Comment