ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿ ಬಸವರಾಜ ಆಕಳವಾಡಿ ನೇಮಕ

ಕೊಪ್ಪಳ ಏ. ; ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿಯವರನ್ನು ಕರ್ನಾಟಕ ಜಾನಪದ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ರಾಜ್ಯ ಅಧ್ಯಕ್ಷ ನಾಡೋಜ ಜಿ. ನಾರಾಯಣ ಅವರು ನೇಮಕ ಮಾಡಿದ್ದಾರೆ. ಬಸವರಾಜ ಆಕಳವಾಡಿಯವರು ನಾಡೋಜ ದಿ. ಎಚ್.ಎಲ್. ನಾಗೇಗೌಡ ಅವರೊಂದಿಗೆ ರಾಮನಗರದ ಹತ್ತಿರ ಸ್ಥಾಪನೆಯಾಗಿರುವ ಜಾನಪದ ಲೋಕ ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ಹೊರ ತಂದಿರುವ ‘ಕನ್ನಡ ಜಾನಪದ ಕೋಶ’ ರಚನಾ ಸ”ತಿ ಸಂಪಾದಕ ಮಂಡಳಿಯ ಸದಸ್ಯರಾಗಿ, ಪರಿಷತ್ತಿನ ‘ಜಾನಪದ ಜಗತ್ತು’ ಪತ್ರಿಕೆಯ ಸಹ ಸಂಪಾದಕರಾಗಿ ಯಶಸ್ವಿ ಕಾರ್ಯ ನಿರ್ವ”ಸಿದ್ದಾರೆ. ಜಾನಪದ ಸಾಹಿತ್ಯ ಸಂಗ್ರಹಣೆ ಮತ್ತು ಕೃತಿ ರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ‘ಜನಪದದಲ್ಲಿ ಮಳೆರಾಯನ ಮುನಿಸು’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಳಿ ಬಿಟ್ಟ ಬಳ್ಳಿ ಮಾಲಿಕೆಯಲ್ಲಿ ಪ್ರಕಟಿಸಿದೆ. ಅವರ ಇನ್ನೊಂದು ಪ್ರಮುಖ ಕೃತಿ ‘ಉತ್ತರ ಕರ್ನಾಟಕದ ಜನಪದ ಹಬ್ಬಗಳು’. ಅಲ್ಲದೆ ಹಲವಾರು ಜಾನಪದ ಲೇಖನಗಳನ್ನು ಬರೆದು ಪ್ರಕಟಿಸುತ್ತ ಬಂದಿದ್ದಾರೆ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಬಗೆಗಿನ ಅಧ್ಯಯನ ಮತ್ತು ಸಕ್ರಿಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಸವರಾಜ ಆಕಳವಾಡಿಯವರನ್ನು ಕರ್ನಾಟಕ ಜಾನಪದ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ನಾಡೋಜ ಜಿ. ನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾನಪದ ಕಲೆ ಹಾಗೂ ಕಲಾವಿದರ ಏಳಿಗೆಗಾಗಿ ಜಾನಪದ ಪರಿಷತ್ತಿನ ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ಕೂಡಲೆ ರಚಿಸಲಾಗುವುದು ಎಂದು ಬಸವರಾಜ ಆಕಳವಾಡಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

Leave a Reply