ಆನೆಗೊಂದಿ ಉತ್ಸವ : ಮಾ. ೩ ರಂದು ಬೆಂಗಳೂರಿನಲ್ಲಿ ಸಭೆ

ಮಾ. ೦೧ (ಕ.ವಾ): ಆನೆಗೊಂದಿ ಉತ್ಸವವನ್ನು ಮಾರ್ಚ್ ೨೩ ಮತ್ತು ೨೪ ರಂದು ಆಚರಿಸಲು ನಿರ್ಧರಿಸಲಾಗಿದ್ದು, ಉತ್ಸವ ಆಚರಣೆ ಕುರಿತಂತೆ ಚರ್ಚಿಸಲು ಹಾಗೂ ಕನಕಗಿರಿ ಉತ್ಸವವನ್ನು ಆಚರಿಸುವ ಕುರಿತಂತೆ ಚರ್ಚಿಸಲು ಮಾ. ೦೩ ರಂದು ಮಧ್ಯಾಹ್ನ ೪-೩೦ ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಏರ್ಪಡಿಸಲಾಗಿದೆ. ಆನೆಗೊಂದಿ ಉತ್ಸವ ಹಾಗೂ ಕನಕಗಿರಿ ಉತ್ಸವ ಆಚರಣೆ ಸಂಬಂಧ ಚರ್ಚಿಸಲು ಮಾ. ೦೩ ರಂದು ಮಧ್ಯಾಹ್ನ ೪-೩೦ ಗಂಟೆಗೆ ಬೆಂಗಳೂರಿನ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮಿತಿ ಕೊಠಡಿ ಸಂಖ್ಯೆ ೩೧೩ ರಲ್ಲಿ ಸಭೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಖಾತೆ ಸಚಿವ ಗೋವಿಂದ ಕಾರಜೋಳ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವರು
Please follow and like us:

Leave a Reply