ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ- ಹೆಚ್.ಎಸ್. ಪಾಟೀಲ.

ಕೊಪ್ಪಳ ಮಾ. ೧೧ (ಕ ವಾ) ಸ್ವರಾಜ್ಯ ಕಲ್ಪನೆಯ ರೂವಾರಿಯಾದ ಛತ್ರಪತಿ ಶಿವಾಜಿ ಅಪ್ರತಿಮ ದೇಶಭಕ್ತ, ಛಲಗಾರ ಹಾಗೂ ಹುಟ್ಟು ಹೋರಾಟಗಾರರಾಗಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ ಅವರು ಬಣ್ಣಿಸಿದರು.
     ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಸುಬೇದಾರರಾಗಿದ್ದ ಷಹಾಜಿ ಹಾಗೂ ಧೀರ ಮಹಿಳೆ ಜೀಜಾಬಾಯಿ ದಂಪತಿಯ ಮಗನಾಗಿ ಹುಟ್ಟಿದ ಶಿವಾಜಿ, ಬಾಲ್ಯದಲ್ಲಿ ತನ್ನ ತಾಯಿಯ ಅಕ್ಕರೆಯಲ್ಲಿ ಬೆಳೆದವರು.  ದೇಶದ ದಕ್ಷಿಣ ಭಾಗದಲ್ಲಿ ಮೊಘಲರು ಹಾಗೂ ಆದಿಲ್‌ಷಾಹಿಗಳ ದಬ್ಬಾಳಿಕೆ ಹೆಚ್ಚಾದ ಸಂದರ್ಭದಲ್ಲಿ ಹಿಂದೂ ರಾಜ್ಯವನ್ನು ಸ್ಥಾಪಿಸುವ ಮೂಲಕ ದೇಶ ರಕ್ಷಣೆಗೆ ತಮ್ಮ ಅಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ.  ಶಿವಾಜಿ ಮಹಾರಾಜರಿಗೂ ಕೊಪ್ಪಳಕ್ಕೂ ಅವಿನಾಭಾವ ನಂಟಿದೆ.  ಕೊಪ್ಪಳದ ಕೋ
      ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಗಜೇಂದ್ರಗಡ ಅನ್ನದಾನೇಶ್ವರ ಕಾಲೇಜಿನ ಕನ್ನಡ ಉಪನ್ಯಾಸಕ ವಸಂತರಾವ್ ಗಾರಗಿ ಅವರು, ಶಿವಾಜಿಯು ಧಾರ್ಮಿಕ ಸಮಾನತೆ, ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಮಾಡಿದ್ದರು.  ಅಲ್ಲದೆ ದಾಸ್ಯತನವನ್ನು ಬಾಲ್ಯದಿಂದಲೇ ವಿರೋಧಿಸುತ್ತ ಬಂದವರು.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರವೂ ಸೇರಿದಂತೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಶ್ರೇಷ್ಠ ರಣಕಲಿ ಶಿವಾಜಿ ಮಹಾರಾಜರು.  ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ.  ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿವಾಜಿಯೇ ಮಾದರಿ.  ಶಿವಾಜಿ ಮಹಾರಾಜರಂತೆ ದೇಶಕ್ಕೆ ಸಮರ್ಪಿಸಿಕೊಳ್ಳುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಅವರು, ಮಹಾನ್ ದೇಶಭಕ್ತನಾಗಿದ್ದ ಶಿವಾಜಿ, ಸಮಸ್ಯೆಗಳು ಬಂದಾಗ ಎದೆಗುಂದದೆ, ಧೈರ್ಯ ಮತ್ತು ಕುಶಲತೆಯಿಂದ ಪರಿಹರಿಸಿಕೊಳ್ಳುವ ಜಾಣ್ಮೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಕರಡಿ, ಮರಾಠಿಗರ ಸಮುದಾಯದ ಮುಖಂಡರುಗಳಾದ ಮಾರುತಿ ನಿಕ್ಕಂ, ನಾಗರಾಜ ಬಡಿಗೇರ, ದೇವಪ್ಪ ಕಿನ್ನಾಳ, ಹನುಮಂತಪ್ಪ ಬಿಡನಾಳ, ಜೀವಣ್ಣ, ತಿಪ್ಪಣ್ಣ ಸುಗತೇಕರ ಮುಂತಾದವರು ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿ ವಂದಿಸಿದರು.  ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
     ವೇದಿಕೆ ಕಾರ್ಯಕ್ರಮದ ನಂತರ ಶಿವಾಜಿ ಮಹಾರಾಜರ ಭಾವಚಿತ್ರ ಸಹಿತ ಮೆರವಣಿಗೆಗೆ ಸಾಹಿತ್ಯ ಭವನ ಆವರಣದಲ್ಲಿ ಚಾಲನೆ ನೀಡಲಾಯಿತು.  ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದು ಗಮನ ಸೆಳೆದರು.  ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.  ಮೆರವಣಿಗೆಯು ಸಾಹಿತ್ಯ ಭವನ, ಜವಾಹರ ರಸ್ತೆ ಮೂಲಕ ತುಳಜಾ ಭವಾನಿ ದೇವಸ್ಥಾನದವರೆಗೆ ಸಾಗಿ ಬಂದಿತು.

Please follow and like us:
error