ಸೇತುಬಂಧ ಶಾಲಾ ಮಕ್ಕಳ ಬಿಳ್ಕೊಡುವ ಸಮಾರಂಭ.

ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ ಇಂಡಿಯಾ ವತಿಯಿಂದ ದಿನಾಂಕ ೨೯-೦೬-೨೦೧೫ ರಂದು ಹೇಮಗುಡ್ಡದ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ನಡೆದ ಶಾಲೆಯಿಂದ ಹೊರಗುಳಿದ ಮತ್ತು ಶಾಲೆ ಬಿಟ್ಟ ಹಾಗೂ ಬಾಲ ಕಾರ್ಮಿಕ ಮಕ್ಕಳ ಸೇತುಬಂಧ ಶಾಲೆಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಜರುಗಿತು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಖ್ಯಾತ ನ್ಯಾಯ
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಎಲ್. ಪಾಟೀಲ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಮೋಚನಾ ಸಂಘದಂತಹ ಸಂಸ್ಥೆಗಳಲ್ಲಿ ಪ್ರಥಮ. ಅದು ಒಬ್ಬ ದೇವದಾಸಿಯ ಮಗ ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಇವತ್ತು ಉಪವಿಭಾಗೀಯ ಅಧಿಕಾರಿ(ಬಿಜಾಪುರ) ಯಾಗಿ ಕಾರ್ಯನಿರ್ವಹಿಸುತ್ತಿದ್ದು, ದೇವದಾಸಿಯರ ಹೆಣ್ಣು ಮಕ್ಕಳು ಡಾಕ್ಟರೇಟ್ ಪದವಿ ಪಡೆಯುವಂತೆ ರೂಪಿಸುವಲ್ಲಿ ಮತ್ತು ಅನೇಕ ಮಕ್ಕಳು ಅನೇಕ ಹುದ್ದೆಗಳನ್ನು ಪಡೆಯುವಂತೆ ಮಾಡುವುದು ದೇಶದಲ್ಲಿಯೇ ವಿಮೋಚನಾ ಸಂಘ ಮೊದಲು. ಅದೇ ರೀತಿಯಾಗಿ ಈ ಭಾಗದಲ್ಲಿ ಕೂಡಾ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಸಂಸ್ಥೆಯ ಸಕಲ ಕಾರ್ಯಗಳಿಗೆ ಸದಾ ಸಿದ್ಧ ಎಂದು ತಿಳಿಸುವ ಮೂಲಕ ಇಂತಹ ಸೇತುಬಂಧ ಶಾಲೆಗಳನ್ನು ನಡೆಸಿಕೊಂಡು ಬಂದ ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ವಂದನೆಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ತರಬೇತಿಗೊಳಿಸಿದ ಡ್ರೈವಿಂಗ್ ಲೈಸನ್ಸ್‌ನ್ನು ವಿತರಿಸಲಾಯಿತು. ಈ ಭಾಗದಲ್ಲಿ ಹಸಿರುಕ್ರಾಂತಿಗಾಗಿ ಕಾರ್ಯಕ್ಷೇತ್ರದ ಗ್ರಾಮಗಳಲ್ಲಿ ಪೌಷ್ಠಿಕಯುಕ್ತ ಆಹಾರದ ಸಸಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.ಸಂಸ್ಥೆಯ ವ್ಯವಸ್ಥಾಕರಾದ ಡಾ|| ಸದಾಶಿವ ಕಾಂಬ್ಳೆಯವರು ವಿಮೋಚನಾ ಸಂಘ ಅಥಣಿ ಅದರ ಪರಿಚಯ ನೀಡಿದರು. ಸಂಸ್ಥೆಯ ಪ್ರಧಾನ ಸಂಯೋಜಕರಾದ ಪ್ರಕಾಶ ಕಡಗದ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತವಿಕ ಮಾತನಾಡುತ್ತಾ, ಸೇತುಬಂಧು ಶಾಲಾ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ವಾದಿಗಳು ಹಾಗೂ ವಿಮೋಚನಾ ಸಂಘ ಅಥಣಿ ಸಂಸ್ಥಾಪನಾ ಅಧ್ಯಕ್ಷರಾದ ಶ್ರೀ ಬಿ.ಎಲ್. ಪಾಟೀಲ್, ಮುಖ್ಯಅತಿಥಿಗಳಾಗಿ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಮತ್ತು ಜಿಲ್ಲಾ ಪೊಲೀಸ್ ತರಬೇತಿ ಸಂಯೋಜಕರಾದ ಶ್ರೀ ಸೋಮಶೇಖರ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಕ್ಷೇತ್ರಾಧಿಕಾರಿಗಳಾದ ಶ್ರೀ ಮಾರುತಿ ರಾಯ್ಕರ್, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಸಂರಕ್ಷಣಾಧಿಕಾರಿಗಳಾದ ರವಿಪವಾರ್, ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ಅಮೃತೇಶ ಸಜ್ಜನ್ ಮತ್ತು ಸಂಸ್ಥೆಯ ವ್ಯವಸ್ಥಾಪಕರಾದ ಡಾ|| ಸದಾಶಿವ ಕಾಂಬ್ಳೆ ಹಾಗೂ ಸಂಸ್ಥೆಯ ಪ್ರಧಾನ ಸಂಯೋಜಕರಾದ ಪ್ರಕಾಶ ಕಡಗದ ಮತ್ತು ಸೇತುಬಂಧ ಶಾಲಾ ಮಕ್ಕಳು ಮತ್ತು ಪಾಲಕರು, ಗ್ರಾಮದ ಜನರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ಹರೀಶ್ ಜೋಗಿ ಮಾತನಾಡಿ ಕೊಪ್ಪಳ ಜಿಲ್ಲಾದ್ಯಂತ ಅನೇಕ ಶಾಲೆಯಿಂದ ಹೊರಗುಳಿದ, ಶಾಲೆಬಿಟ್ಟ ಬಾಲ ಕಾರ್ಮಿಕರನ್ನು ಕಂಡಿದ್ದೇವೆ. ಈ ಭಾಗದಲ್ಲಿ ವಿಮೋಚನಾ ಸಂಸ್ಥೆ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಜೊತೆಗೂಡಿ ಇಂತಹ ಮಕ್ಕಳನ್ನು ಕನಿಷ್ಠ ಅಂಶಕ್ಕಿಳಿಸುವುದಗೋಸ್ಕರ ಶ್ರಮಿಸುತ್ತಿರುವುದಕ್ಕೆ ಈಗಾಗಲೇ ಅನೇಕ ಸೇತುಬಂಧು ಶಾಲೆಗಳನ್ನು ನಡೆಸಿ ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದರ ಮೂಲಕ ಮತ್ತು ಆರೋಗ್ಯ, ವೃತ್ತಿಪರ ತರಬೇತಿಗಳನ್ನು ಕೊಡುವುದರ ಮೂಲಕ ಆ ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಸಂಸ್ಥೆಯ ಕೊಡುಗೆ ಅಪಾರ. ಬಾಲ ಕಾರ್ಮಿಕ, ಶಾಲೆಯಿಂದ ಹೊರಗುಳಿದ, ಮತ್ತು ಶಾಲೆ ಬಿಟ್ಟ ಮಕ್ಕಳಿಗಾಗಿ ಇಂತಹ ಶಾಲೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದಕ್ಕೆ ನಮ್ಮ ಯುನೆಸೆಫ್‌ನಿಂದ ತಮಗೆ ತುಂಬು ಹೃದಯದ ವಂದನೆಗಳು ಎಂದು, ಇನ್ನು ಸದಾಕಾಲ ಇಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಲು ನಮ್ಮ ಯೋಜನೆಯಾಗಲಿ ಅಥವಾ ಜಿಲ್ಲಾಧಿಕಾರಿಗಳಿಂದ ಸಹಾಯವಾಗಲಿ ಕೊಡಲು ಸದಾಸಿದ್ಧ ಎಂದು ಹಾರೈಸಿದರು. ಮಾರುತಿ ರಾಯ್ಕರ್ ಮಾತನಾಡಿ ಸೇತುಬಂಧ ಶಾಲಾ ಮಕ್ಕಳಿಗೆ ವಸತಿ ಸಹಿತ ಶಾಲೆಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.

Leave a Reply