ವಿದ್ಯಾರ್ಥಿಗಳು ಛಲಬಿಡದೆ ಸಾಧಿಸಿ – ಕೆ.ಸೈಯದ್ ಮಹ್ಮದ್.

ಹೊಸಪೇಟೆ – ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ನಿರ್ಧಿಷ್ಟವಾದ ಗುರಿಯನ್ನು ಹೊಂದಿ ಛಲಬಿಡದೆ ಸಾಧಿಸಿ ಎಂದು ರೋಟರಿ ಅಧ್ಯಕ್ಷ ಕೆ.ಸೈಯದ್ ಮಹ್ಮದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದಲ್ಲಿಂದು ರೋಟರಿ ಕ್ಲಬ್ ವತಿಯಿಂದ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪರೀಕ್ಷೆ ಒಂದು ಸಂಭ್ರಮ’ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾನ್ನಾಗಿಸಿಕೊಂಡು ಏಕಾಗ್ರ ಮನಸ್ಸಿನಿಂದ ಸಾಧಸಿ,  ಸಾಧನೆಯ ಸ್ಪೂರ್ತಿಗಾಗಿ ಸಾಧಕರ ಅಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ತಮ್ಮದೇ ಆದ ಗುರಿ ಇರಬೇಕು ಆ ಗುರಿಯನ್ನು ಸಾಧಿಸಲು ಒಳ್ಳೆಯ ಸ್ವಭಾವ, ಗುಣ ಹಾಗೂ  ಸಕರಾತ್ಮಕ ಭಾವನೆಗಳನ್ನು ಬೆಳೆಸಿ. ಅದರ ಜೊತೆಯಲ್ಲಿ ಸಾಕಷ್ಟು ಶ್ರಮಿಸಿದರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ.  ವಿದ್ಯಾರ್ಥಿಗಳಿಗೆ ಕೆಲವು ಮಹಾ ವ್ಯಕ್ತಿಗಳನ್ನು ಪರಿಚಯ ಮಾಡಿಸಿ ಅವರ ಮಾರ್ಗದರ್ಶನದಲ್ಲಿ ನಡೆದರೆ ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
 ಎಂದು ಕರೆ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾದ ಕಾಕುಬಾಳು ಸೀತಾರಾಮ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಅತ್ಯುನ್ನತ ಅಭಿಲಾಷೆಯನ್ನು ಹೊಂದಿ ಸಾಧಿಸಬೇಕು, ಅದರಂತೆ ಅನುಕರಣಿ ಮಾರ್ಗ ಅನುಸರಿಸದೆ ತಮ್ಮ ಸ್ವಂತಿಕೆಯನ್ನು ಮರೆಯಬೇಕು, ವಿದೇಶಿ ಸಂಸ್ಕೃತಿ ಇಂದು ಯುವ ಜನಾಂಗದ ಮೇಲೆ ದಾಳಿ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಸಮತೋಲನದಿಂದ ಜಾಗೃತರಾಗಿ ಮುನ್ನಡಿಯಿಡಬೇಕೆಂದು ಆಶಿಸಿದರು.
ರಾಷ್ಟ್ರೀಯ ತರಬೇತುದಾರರಾದ ಸವಿತಾ ರಮೇಶ್ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಪದ್ಧತಿ ಹಾಗೂ ಪರೀಕ್ಷೆಯ ಪೂರ್ವ ಸಿದ್ಧತೆ ಬಗ್ಗೆ ಕೂಲಂಕುಷವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಸರಳ ಟಿಪ್ಸ್ ನೀಡಿದರು. ಈ ಶಿಬಿರವು ೬೨೫ ತರಬೇತಿ ಶಿಬಿರವಾಗಿದ್ದು ಹೊಸಪೇಟೆ ರೋಟರಿ ಸಂಸ್ಥೆಯಿಂದ ಇದು ೨೫ನೇ ಶಿಬಿರವಾಗಿದೆ.  ಕ್ಲಬ್‌ವತಿಯಿಂದ ಈ ಹಿಂದೆ ನಡೆಸಿದ ಎಲ್ಲಾ ಶಿಬಿರಗಳಿಂದ ಯಶ್ವಸಿಯಾಗಿದ್ದು  ಶಿಬಿರದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಪತ್ರಗಳ ಮೂಲಕ ತಮ್ಮ ಮೆಚ್ಚುಗೆಯನ್ನು ತಿಳಿಸಿರುವುದೇ ನಿದರ್ಶನವಾಗಿದೆ.
    ಈ ಸಂದರ್ಭದಲ್ಲಿ ಸಾಕ್ಷರತಾ ಆಂದೋಲನದ ಅಧ್ಯಕ್ಷರಾದ ಹೆಚ್.ಶ್ರೀನಿವಾಸ ರಾವ್, ಜಂಟಿ ಕಾರ್ಯದರ್ಶಿ ಮತ್ತು ನ್ಯಾಷನಲ್ ಕಾಲೇಜಿನ ಸಹಾಯಕ ಅಧ್ಯಕ್ಷರಾದ ಕೆ.ಎಸ್.ಕೃಷ್ಣಮೂರ್ತಿ, ಗೋವಿಂದ ಪಾಟೀಲ್, ದಾದಪೀರ್, ವೇದಮೂರ್ತಿ, ಮಹಮ್ಮದ ನಯಿಂ, ಡಿ.ಕೆ.ಸೋನಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಇನ್ನರ್ ವ್ಹೀಲ್ ಅಧ್ಯಕ್ಷೆ ನಂದಿನಿ ಚಿಕ್ಕಮಠ ಕಾರ್ಯದರ್ಶಿ ರೇಖಾ ಪ್ರಕಾಶ್, ಮಾಜಿ ಅಧ್ಯಕ್ಷರಾದ ಅನ್ನಪೂರ್ಣ, ಮತ್ತಿತರು ಹಾಜರಿದ್ದರು.

Leave a Reply