fbpx

ಸೆ.೫ಕ್ಕೆ ’ಸಿಂಹಾಸನ ಖಾಲಿ ಇದೆ’, ನಾಟಕ ಪ್ರದರ್ಶನ

ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಸೆ ೫ ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ’ಶಿಕ್ಷಕರ ಕಲಾ ವೃಂದ’ ದಿಂದ ’ಸಿಂಹಾಸನ ಖಾಲಿ ಇದೆ’,ಎಂಬ ನಾಟಕ ಮದ್ಯಾಹ್ನ ೩ಕ್ಕೆ ಪ್ರದರ್ಶನಗೊಳ್ಳಲಿದೆ.

          ಸಮಕಾಲೀನ ರಾಜಕೀಯಕ್ಕೆ ಈ ನಾಟಕವು ವಿಡಂಬನೆಯ ಮೂಲಕ ಪ್ರತಿಕ್ರಿಯಿಸುತ್ತದೆ.ಸುಶೀಲ ಕುಮಾರ ಸಿಂಹ ಅವರು ಈ ನಾಟಕವನ್ನು ಹಿಂದಿ ಯಲ್ಲಿ ರಚಿಸಿದ್ದು,ಕನ್ನಡಕ್ಕೆ ತಿಪ್ಪೆಸ್ವಾಮಿಯವರು ಅನುವಾದ ಮಾಡಿದ್ದಾರೆ.
ನಾಟಕದ ಉದ್ಘಾಟನೆಯನ್ನು,ನಾಟಕ ಅಕಾಡೆಮಿ ಅಧ್ಯಕ್ಷರಾದ ಎಲ್.ಶೇಖಮಾಸ್ತರ ಮಾಡಲಿದ್ದು,ಮುಖ್ಯಅತಿಥಿಗಳಾಗಿ ಮೈಸೂರ ವಿ.ವಿ.ವಿಶ್ರಾಂತ ಹಿಂದಿ ಪ್ರಾಧ್ಯಾಪಕರಾದ ತಿಪ್ಪೆಸ್ವಾಮಿಯವರು,ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎ ಶ್ಯಾಮಸುಂದರ,ಬಿ.ಇ.ಓ.ಉಮೇಶ ಪೂಜಾರ್,ನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರು,ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಪ್ರಭು ಕಿಡದಾಳ,ತಾಲೂಕ ಅಧ್ಯಕ್ಷರಾದ ಮಂಜುನಾಥ ಬಿ,ಮತ್ತಿತರರು ಭಾಗವಹಿಸಲಿದ್ದಾರೆ.
    ನಾಟಕ ವಿನ್ಯಾಸಮತ್ತು ನಿರ್ದೇಶನ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಮಾಡಿದ್ದಾರೆ. ನಾಟಕ ಪ್ರದರ್ಶನ ಉಚಿತವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶಿಕ್ಷಕರ ಕಲಾ ವೃಂದ ಪ್ರಕಟನೆಯಲ್ಲಿ ಕೋರಿದ್ದಾರೆ.
Please follow and like us:
error

Leave a Reply

error: Content is protected !!