ಅಪ್ಪಿ ಹತ್ತು ರೂಪಾಯಿ ಕೊಡೋ!

ಕೆಲ ದಿನಗಳ ಹಿಂದೆ ಕೊಪ್ಪಳದಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿದೆ. ಕೊಪ್ಪಳದಿಂದ ಮುಂಜಾನೆ ೮.೩೦ಕ್ಕೆ ರೈಲನ್ನು ಹತ್ತಿ ಕುಳಿತೆ ಹೇಗಿದ್ದರೂ ಇನ್ನೂ ಬಳ್ಳಾರಿ ತಲುಪಲು ೩ ಗಂಟೆ ಆಗುತ್ತೆ. ಕಿಟಕಿ ಪಕ್ಕ ಕುಳಿತ ನಾನು ಮೋಡ ಮುಸಕಿದ ವಾತವರಣ ನೋಡಿ ಅಬ್ಬಾ ಇವತ್ತು ಆದರೂ ಮಳೆರಾಯ ಕೈ ಕೊಡದೇ ಇರಲಿ ಎಂದು ಮನಸ್ಸಲ್ಲಿ ಅಂದು ಕೊಳ್ಳುತ್ತಾ ಹಾಗೇ ತಣ್ಣನೆಯ ಗಾಳಿಗೆ ನಿದ್ದೆಗೆ ಜಾರಿದೆ. ರೈಲು ಹೊಸಪೇಟೆ ಜಂಕ್ಷನ್ ತಲುಪಿದಾಗ ಟೀ, ಬಿಸಿ ಬಿಸಿ ಇಡ್ಲಿ ಅನ್ನುವ ಜೊರು ಶಬ್ದಕ್ಕೆ ಎಚ್ಚರಗೊಂಡು ಟೀ ಹಿರುತ್ತಾ ಕುಳಿತೆ. ರೈಲು ಮತ್ತೇ ಹೊರಟಿತು. ಮತ್ತೇ ನಿದ್ದೆಗೆ ಜಾರಿದೆ. 
ನನ್ನಗಿನ್ನು ೨೧ರ ಹರೆಯ ಮುಖದ ಮೇಲೆ ಚಿಗುರು ಮೀಸೆ ಮೂಡಿವೆ, ಯೌವ್ವನದ ಹುರುಪು ಕಾಲೇಜಿನಲ್ಲಿ ಕೂಡಾ ಹುಡಿಗಿರನ್ನು ಚುಡಾಯಿಸುತ್ತಾ ಮಜಾ ಮಾಡುತ್ತಾ ತಕ್ಕ ಮಟ್ಟಿಗೆ ಶಿಕ್ಷಣದ ಬಗ್ಗೆಯೂ ಗಮನ ಕೊಡುತ್ತಾ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಎನ್ನುವ ಸಾಕಷ್ಟು ನಂಬಿಕೆ ಭರವಸೆಗಳೂ ಕೂಡಾ ನನ್ನಲ್ಲಿ ಮನೆ ಮಾಡಿದ್ದವೂ ಆದರೆ ಎಲ್ಲಾ ಗುರಿಗಳೂ ಕೇವಲ ನನ್ನ ಸ್ವಾರ್ಥಕ್ಕೆ ಸೀಮಿತವಾಗಿದ್ದವು. 
ಆದರೆ ಇತ್ತೀಚೆಗೆ ನಡೆದ ಘಟನೆಯೊಂದು ನನ್ನ ಬದುಕಿಗೆ ಹೊಸದೊಂದು ಮುನ್ನುಡಿ ಬರೆದಿದೆ.  ಅವತ್ತಿನ ಆ ಕ್ಷಣ ನನ್ನ ಮನಸ್ಸಲ್ಲಿ ಅಚ್ಚತ್ತೋತ್ತಿದೆ. ಯಾಕೆಂದರೆ ಮಲಗಿದ್ದನನ್ನನ್ನು ಅವತ್ತು ರೈಲ್ಲಿನಲ್ಲಿ ಅಪರಿಚಿತ ಧನ್ವಿಯೊಂದು ಅಪ್ಪಿ ಎಂದು ಕರೆಯಿತು ಯಾರು ಇರಬಹುದೆಂದೂ ಕುತೂಹಲದಿಂದ ಕಣ್ಣಬಿಟ್ಟೆ, ನೋಡಿದರೆ ಮಂಗಳಮುಖಿ ನಾನು ಯಾವತ್ತು ಅವರನ್ನು ನೇರವಾಗಿ ನೋಡಿರಲಿಲ್ಲ. ಆ ಕ್ಷಣಕ್ಕೆ ನಾನು ತುಂಬಾ ಆಶ್ಚರ್ಯದಿಂದ ಮಂಗಳಮುಖಿ ನೋಡುತ್ತಾ ೨ ನಿಮಿಷ ತಬ್ಬಿಬ್ಬನಾದೆ. 
ಮತ್ತೇ ಏರು ಧನ್ವಿಯಲ್ಲಿ ಹೇ ಅಪ್ಪಿ ಹತ್ತು ರೂಪಾಯಿ ಕೊಡೋ ಅಂದಳು/ಅಂದನು ನನ್ನ ಹತ್ರ ಚಿಲ್ಲರೆ ಇಲ್ಲರೀ ಅಂದೆ ಅಯ್ಯೋ ಹಂಗ ಯಾಕ ಹೇಳ್ತೀ ಕೊಡೋ ನಾನ್ ಹೋಗ್ತಿನಿ, ಆಯ್ತು ಅಂತಾ ಜೇಬಿಗೆ ಕೈ ಹಾಕಿದೆ ಹತ್ತು ರೂಪಾಯಿ ನೋಟನ್ನು ಅವಳ ಕೈಗೆ ಇಡುತ್ತಾ, ಕುತೂಹಲ ತಡೆಯದೇ ನಾನು ನಿಮ್ಮ ಜೊತೆ ಸ್ವಲ್ಪ ಮಾತಡಬೇಕು ಅಂದೆ. 
ಯಾಕೆಂದರೆ ಅಲ್ಲಿವರಗೆಗೂ ನಾನು ಅವರನ್ನು ಟಿ.ವಿ. ಪೇಪರ್‌ಗಳಲ್ಲಿ ನೋಡಿದ್ದೆ. ಅವತ್ತು ಕಣ್ಣಾರೆ ನೋಡಿದ ಅವರನ್ನು ನನಗೆ ಮುಜುಗರ, ಭಯ ಎರಡೂ ನನ್ನನ್ನು ಆವರಿಸಿದ್ದವು. ತಡವರಿಸುತ್ತಲೇ ಮಾತು ಆರಂಭಸಿದೆ. ಅಯ್ಯೋ ಅಪ್ಪಿ ಅದೇನೋ ಬೇಗ ಹೇಳು ನಾನು ಮುಂದಿನ ಜಂಕ್ಷನ್‌ನಲ್ಲಿ ಇಳಿಬೇಕು ಅಂದರು. 
ನನ್ನಲ್ಲಿ ಇದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಂಡುಕೊಳ್ಳಬೇಕು, ಅಕ್ಕಾ ಕುಳಿತುಕೊಳ್ಳಿ ಸ್ವಲ್ಪ ಕುಳಿತುಕೊಳ್ಳಿ ಅಂದೆ. ಭೋಗಿಯಲಿ ಕುಳಿತ ಜನ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು, ಅಕ್ಕಾ ನೀವು ಈ ರೊಕ್ಕ ತಂಗೊಂಡು ಏನ್ ಮಾಡತಿರಿ, ಮತ್ತೇ ನೀವು ಮಲಗಿದ್ದವರನ್ನು ಎಬ್ಬಿಸಿ ರೊಕ್ಕ ಕೇಳಿತಿರಿ ಇದು ಸರಿ ಅಲ್ಲ ಅಲ್ಲವಾ ಅಕ್ಕಾ., 
ಅದುವರೆಗೂ ಅವಳಲ್ಲಿ ಮಡುಗಟ್ಟಿದ ದುಃಖ ಕಣ್ಣೀರು ಸುರಿಸುತ್ತಾ ಅಪ್ಪಿ ನನಗೆ ಈ ೩ ವರ್ಷದಲ್ಲಿ ಯಾರು ಒಬ್ಬರೂ ಕೂಡಾ ಮಮತೆಯ ಸಂಬಂಧದಿಂದ ನೋಡಿರಲಿಲ್ಲ, ಮೊದಲನೇ ಸಲ ನನ್ನತಂವರಿಗೆ ನೀನು ಇವತ್ತು ಅಕ್ಕಾ ಎಂದದ್ದು ಕೇಳಿ ಖುಷಿ ಆಯ್ತು  ಅದೂ ನನ್ನ ಬದುಕಿನ ಬಗ್ಗೆ ಮಾತನಾಡುತ್ತಿರುವೇ, ಅಕ್ಕಾ ನೀವು ಅಳಬೇಡಿ ಏನು ಅಂತಾ ಹೇಳಿ ನನಗೂ ಕೇಳೋ ಕುತೂಹಲವಿದೆ, ನಿಮ್ಮ ತರಹ ಇರುವರೆಗೂ ಬಗ್ಗೆ ಸರಕಾರ ಬೇಕಾದ ಎಲ್ಲಾ ಸೌಲಭ್ಯಗಳು ಮಾಡಲು ಮತ್ತಷ್ಟು ರೀತಿಯಲ್ಲಿ ಸಜ್ಜಾಗಿದೆ. ಎನ್ನುತ್ತಾ ಮಾತು ಮುಂದುವರಿಸಿದೆ.
ನಮ್ಮ ಬದುಕು ಹೀಗೆ ನಾವು ಇರುವಷ್ಟು ಕಾಲ ಸಮಾಜದಲ್ಲಿ ನಮ್ಮನ್ನು ಮನುಷ್ಯ ರೀತಿಯಲ್ಲಿ ನೋಡುವ ವರ್ಗ ಕೇವಲ ಸೀಮಿತ ಅದು ನಿಮ್ಮಂತ ತಿಳುವಳಿಕೆ ಇರುವವರು ಮಾತ್ರ, ಅದು ಅಲ್ಲದೇ ನಾವು ನಿಮ್ಮಿಂದ ಪಡೆದ ಹಣದಿಂದ ನಮ್ಮ ತರಹ ಹಲವರಿಗೆ ಸಹಾಯ ಮಾಡುತ್ತೇವೆ. ಅನಾಥಲಯ, ವೃದ್ಧ ದಂಪತಿಗಳಿಗೆ, ವೀಕಲಚೇತನರಿಗೆ ಸಹಾಯ ಮಾಡುತ್ತೇವೆ.
ನಮಗಾಗಿ ನಮ್ಮ ಕುಟುಂಬದವರು ಇರುವುದಿಲ್ಲ, ಇದ್ದರೂ ಕೂಡಾ ಅವರು ನಮ್ಮನ್ನು ಸಲುವುದಿಲ್ಲ, ಉಸಿರುವವರೆಗೂ ನಮ್ಮ ಈ ಸಮಾಜ ಕಳಂಕ ದೃಷಿಯಿಂದ ನೋಡುತ್ತೆದೆ. ಆದರೂ ನಾವು ಬರುವ ಎಲ್ಲಾ ಕಷ್ಟಗಳಿಗೆ ಮನದಲ್ಲೇ ಮನೆ ಬದುಕು ಸಾಗಿಸಬೇಕು, ಸರಿ ನಾನು ಹೋಗಿನ್ತಿ ಜಂಕ್ಷನ್ ಅನ್ನುತ್ತಾ ಟಾಟಾ ಮಾಡುತ್ತಾ ಮರೆಯಾದಳು.
 ಮೊನ್ನೆ ಮತ್ತೇ ರೈಲಿನಲ್ಲಿ ತುಮಕೂರಿಗೆ ಹೋಗುವಾಗ ಮಲಗಿದ್ದ ನನ್ನನ್ನು ಎಬ್ಬಿಸಿ ಹೇ ಮಾಮಾ ರೊಕ್ಕ ತಾ ಎಂದು ಮತ್ತೊಬ್ಬ ಮಂಗಳಮುಖಿ ಅಂದಳು ಜೇಬಿನಿಂದ ಹತ್ತು ರೂಪಾಯಿ ಕೊಟ್ಟೆ. ಆದರೆ ನನಗೂ ಇವತ್ತಿಗೂ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ. ಇವರನ್ನೂ ಏನೆಂದು ಕರೆಯೋಣ ಮಂಗಳಮುಖಿ ಅನ್ನಲ್ಲು ಮನಸ್ಸು ಒಪ್ಪುತ್ತಿಲ್ಲ. ಇವರು ನಮ್ಮಂತೇ ಮನ್ಯಷರೇ ಆದರೂ ಯಾಕೆ ಬುದ್ಧಿ ಜೀವಿಗಳು ಹೀಗೇ.. ಇನ್ನಾದರೂ ಈ ಸಮಾಜ ಪರಿವರ್ತನೆಯಾಗಲಿ..  ಮತ್ತೇ ನಿದ್ರಾದೇವಿ ನನ್ನನ್ನೂ ಆವರಿಸಿದಳು ಆದರೆ ಮತ್ತೇ ಯಾರೂ ಅದೇ ತರಹದ ಧ್ವನಿಯೊಂದು ಅಪ್ಪಿ ಹತ್ತು ರೂಪಾಯಿ ಕೊಡೋ! ಅಂದಾಯಿತು.
ಪ್ರವೀಣ ಕೀಲಿಪುಟ್ಟಿ
ಪ್ರಥಮ ಸಮೂಹ ಸಂವಹನ 
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಮರಳೂರು
ತುಮಕೂರು
ಮೊ: ೮೧೫೧೦೦೦೫೧೭
ಇ-ಮೇಲ್: Praveen.nk53@gmail.com
ಚಿತ್ರಗಳು : ಅಂತರ್ಜಾಲ ಕೃಪೆ
Please follow and like us:
error