ಜಿಲ್ಲೆಯ ವಿವಿಧೆಡೆ ಗುಳೆ ತಡೆ ರಥಕ್ಕೆ ಚಾಲನೆ

ಯಲಬುರ್ಗಾದಲ್ಲಿ ಗುಳೆ ತಡೆ ರಥಕ್ಕೆ ಚಾಲನೆ

  ಯಲಬುರ್ಗಾ ತಾಲೂಕಿನಲ್ಲಿ ಗುಳೆ ತಡೆ ರಥಕ್ಕೆ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಅವರು ಚಾಲನೆ ನೀಡಿದರು. 
ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ವರದಾನವಾಗಿದೆ. ಉದ್ಯೋಗ ಬಯಸಿ ಬಂದ ಸ್ಥಳೀಯವಾಗಿ ಒಂದು ಕುಟುಂಬಕ್ಕೆ ೧೦೦ ದಿನ ಉದ್ಯೋಗದ ಖಾತ್ರಿ ನೀಡುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಬಲ ಪಡಿಸುವುದು, ವಲಸೆ ತಡೆಗಟ್ಟುವುದು ಮತ್ತು ಆರ್ಥಿಕ ಬದ್ರತೆಯನ್ನು ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಲು ರೋಜಗಾರಿಗಳಿಗೆ ಕರೆ ನೀಡಿದರು.
 ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಾದ ಫಕೀರಪ್ಪ ಕಟ್ಟಿಮನಿ, ವಿಶ್ವನಾಥ ರಾಠೋಡ, ಬಸವರಾಜ ಬಡಿಗೇರ, ಭಿಮಣ್ಣ ಹಾವಳಿ, ಹನಮಂತ ಆಚಾರ, ಅಶೋಕ ರಾಂಪೂರ, ಮತ್ತು ತಾಲೂಕಾ  ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಡ್ಡರಹಟ್ಟಿ : ಗುಳೆ ತಡೆ ಅಭಿಯಾನ ರಥಕ್ಕೆ ಚಾಲನೆ
  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುಳೆ ತಡೆ ಅಭಿಯಾನ ರಥಕ್ಕೆ   ಗ್ರಾಮ ಪಂಚಾಯತ ವಡ್ಡರಹಟ್ಟಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಮಾರುತಿ ಅವರು ಚಾಲನೆ ನೀಡಿದರು.
  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಮಂಜುನಾಥ ಅಂಗಡಿ ಅವರು ಮಾತನಾಡಿ, ಗುಳೆ ತಡೆ ಅಭಿಯಾನ ರಥದ ಉದ್ದೇಶದ ಬಗ್ಗೆ ತಿಳಿಸಿ, ಮುಖ್ಯವಾಗಿ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಒಂದು ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ನೂರು ದಿನ ಕೆಲಸ ನೀಡಲಾಗುತ್ತಿದೆ. ದಿನಕ್ಕೆ ೧೯೧=೦೦ ರೂ. ಕೂಲಿ ವೇತನವನ್ನು ನೀಡಲಾಗುತ್ತಿದೆ. ನಂತರ ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ, ವೈಯಕ್ತಿಕ ಕಾಮಗಾರಿಗಳನ್ನು ನೀಡಲಾಗುವುದು ಆದ್ದರಿಂದ ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಗುಳೆ ಹೋಗದಂತೆ ಮನವಿ ಮಾಡಿದರು. 
  ಕಾರ್ಯಕ್ರಮದಲ್ಲಿ ತಾಲೂಕಾ ಐ.ಇ.ಸಿ ಸಂಯೋಜಕ ಕೃಷ್ಣಾನಾಯಕ, ತಾಲೂಕಾ ಸಾಮಾಜಿಕ ಲೆಕ್ಕಪರಿಶೋಧನ ಅಧಿಕಾರಿ ವೀರನಗೌಡ ಪಿ., ವಡ್ಡರಹಟ್ಟಿ ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.
ಗುಳೆ ತಡೆ ಅಭಿಯಾನಕ್ಕೆ ಜಿ.ಪಂ. ಸಿಇಓ ಕೃಷ್ಣ ಡಿ.ಉದಪುಡಿ ಚಾಲನೆ
  ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕುರಿತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಗಾರರು ಗುಳೆ ಹೋಗದಂತೆ ತಡೆಯುವ ಉದ್ದೇಶದಿಂದ ನ.೧೩ ರಿಂದ ನ.೨೩ ರವರೆಗೆ ಗುಳೆ ತಡೆ ಅಭಿಯಾನ ರಥದ ವಾಹನಕ್ಕೆ ಹಸಿರು ಧ್ವಜ ತೋರಿಸುವ ಮೂಲಕ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ಸಂಬಂಧಿಸಿದ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಒಳಗೊಂಡು ರಥವನ್ನು ಸ್ವಾಗತಿಸಿ ಪ್ರಚಾರ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಒಬ್ಬರಂತೆ ಸಿಬ್ಬಂದಿಯನ್ನು ನಿಯೋಜಿಸಿ ಗುಳೆತಡೆ ಅಭಿಯಾನ ರಥವು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿ.ಪಂ.ಸಿಇಓ ಕೃಷ್ಣ ಡಿ.ಉದಪುಡಿ ಅವರು ತಿಳಿಸಿದರು. 
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಬಿ.ಕಲ್ಲೇಶ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಸಂಯೋಜಕರಾದ ಶ್ರೀನಿವಾಸ ಚಿತ್ರಗಾರ, ಐಇಸಿ ಸಂಯೋಜಕ ದೇವರಾಜ ಪತ್ತಾರ ಹಾಜರಿದ್ದರು. 
ಆನೆಗುಂದಿಯಲ್ಲಿ ಗುಳೆ ತಡೆ ರಥಕ್ಕೆ ಚಾಲನೆ
  ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮ ಪಂಚಾಯತಿ ಆವರಣದಲ್ಲಿ ಗುಳೆ ತಡೆ ಅಭಿಯಾನ ರಥಕ್ಕೆ ತಾಲೂಕ ಪಂಚಾಯತಿ ಸದಸ್ಯೆ ರಾಜೇಶ್ವರ ಹಾಗೂ ಗ್ರಾ.ಪಂ.ಅಧ್ಯಕ್ಷ ರಾಜೇಶ ಅವರು ಚಾಲನೆ ನೀಡಿದರು. 
ನಂತರ ಮಾತನಾಡಿದ ಅವರು, ಗ್ರಾಮೀಣ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ೧೦೦ ದಿನ ಕೆಲಸ ನೀಡಲಾಗುತ್ತದೆ. ದಿನಕ್ಕೆ ೧೯೧/- ಕೂಲಿ ವೇತನವನ್ನು ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ಜೀವನೋಪಾಯ ಮತ್ತು ಮಾನವ ಅಭಿವೃದ್ದಿ ಆಸ್ತಿಯ ಸೃಜನೆ ಬಗ್ಗೆ ಮಾಹಿತಿ ನೀಡಿದರು. ನಂತರ ಎಸ್.ಸಿ. ಎಸ್.ಟಿ. ಫಲಾನುಭವಿಗಳಿಗೆ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡಲಾಗುವುದು. ಈ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಗುಳೆ ಹೋಗದಂತೆ ಮನವಿ ಮಾಡಿದರು. 
Please follow and like us:
error

Related posts

Leave a Comment