ದದೇಗಲ್ ಶಾಲೆಯಲ್ಲಿ ಸೈಕಲ್ ವಿತರಣೆ

ಕೊಪ್ಪಳ: ತಾಲೂಕಿನ ದದೇಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯಸರಕಾರದಿಂದ ೨೦೧೪-೧೫ ನೇ ಸಾಲಿನ ೮ನೇ ತರಗತಿ ಮಕ್ಕಳಿಗಾಗಿ ಕೊಡಲ್ಪಡುವ ಉಚಿತ ಸೈಕಲ್‌ಗಳನ್ನು ಇಂದು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಶಾಲೆಯ ಮುಖ್ಯೋಪಾದ್ಯಾಯರ ನೇತೃತ್ವದಲ್ಲಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಗಾಳೆಪ್ಪ ಹೆಚ್. ಪೂಜಾರ, ಸದಸ್ಯರುಗಳಾದ ಸುರೇಶ ಬಂಡಿ, ಅಂಜಪ್ಪ ತಳವಾರ, ಕರಿಯಮ್ಮ ಅಜ್ಜಿ, ಹಾಗೂ ಗ್ರಾಮದ ಹಿರಿಯರಾದ ಮಾರುತ್ತೆಪ್ಪ, ಮತ್ತು ಶಾಲೆಯ ಹಿರಿಯ ಶಿಕ್ಷಕರಾದ ಲಲಿತಾ ಶಾಸ್ತ್ರಿ, ಮಕ್ಕಳ ಪಾಲಕರು, ಶಾಲೆಯ ಶಿಕ್ಷಕವೃಂದ್ದ ಉಪಸ್ಥಿತರಿದ್ದರು. 

Leave a Reply