fbpx

ಕರ್ನಾಟಕ ರಾಜೋತ್ಸವ ದಿನಾಚರಣೆ.

ಇಂದು ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜೋತ್ಸವ ದಿನಾಚರಣೆಯ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಉಪನ್ಯಾಸ ನೀಡಿದ ಸಂಸ್ಥೆಯ ಉಪನ್ಯಾಸಕರಾದ ಶ್ರೀ ವಿ.ಆರ್.ಪಾಟೀಲ್ ಮಾತನಾಡಿ  ನಮ್ಮ ಕನ್ನಡ ನಾಡು ಪುರಾತನ ಕಾಲದಿಂದಲೂ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಈ ನೆಲದಲ್ಲಿ ಕನ್ನಡ ನಾಡು ನುಡಿಯನ್ನು ಸಂರಕ್ಷಿಸಲು ಪ್ರಮುಖ ರಾಜಮನೆತನಗಳು ಹೋರಾಟ ಮಾಡಿದವು. ಹಾಗೇ ಮುಂದುವರೆದು ಮಾತನಾಡಿ ಇಂದಿನ ರಾಜಕೀಯ ಮತ್ತು ಪ್ರಾದೇಶಿಕವಾಗಿ ಅಸ

ಮತೋಲನವು ಪ್ರತ್ಯೇಕ ರಾಜ್ಯದ ಕೂಗನ್ನು ಹುಟ್ಟಿಹಾಕಿದೆ, ಹಿಂದುಳಿದ ಪ್ರದೇಶಗಳಿಗೆ ರಾಜಕೀಯ.ಔದ್ಯೋಗಿಕ.ಕೈಗಾರಿಕ.ಶೈಕ್ಷಣಿಕ.ಸಾಹಿತ್ಯಿಕ ಮತ್ತು ಮೂಲ ಸೌಲ್ಯಭಗಳನ್ನು ಸರಿಯಾಗಿ ಒದಗಿಸಿದಾಗ ಇಂಥಹ ಕೊರಗನ್ನು  ನಿವಾರಿಸಿದಾಗ ಮಾತ್ರ ಸಮೃದ್ದ ಅಖಂಡ ಕರ್ನಾಟಕವನ್ನು ನಿರ್ಮಾಣ ಮಾಡಲು ಎಲ್ಲರೂ ವಿಮರ್ಶಾತ್ಮಕವಾಗಿ ಚಿಂತನೆ ಮಾಡುವುದು ಪ್ರಸ್ತುತ ದಿನದಲ್ಲಿ ಅಗತ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವಹಿಸಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರಿ ಪ್ರಕಾಶ ಕೆ ಬಡಿಗೇರ ಮಾತನಾಡಿ  ಕನ್ನಡ ನಾಡು ಶಾಂತಿ ಸೌಹಾರ್ದತೆಯ ಬೀಡಾಗಿದ್ದು ಇಂತಹ ನೆಲದಲ್ಲಿ ಸಾಹಿತಿಗಳ ಮೇಲೆ ಮಾರಾಣಾಂತಿಕ ಹಲ್ಲೆ ನಡೆಯುವುದು ವಿಶಾದಕರ ಎಂದು ಹೇಳುತ್ತಾ ಕನ್ನಡದ ಸಂರಕ್ಷಣೆಗೆ ಎಲೆಮರೆಯ ಕಾಯಿಗಳಂತೆ ಇಂದಿಗೂ ಸೇವೆ ಮಾಡುವವರು ಇದ್ದಾರೆ ಅವರನ್ನು ನಾವು ಸಮಾಜದಲ್ಲಿ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದು ಹೇಳಿದರು ಸಮಾರಂಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಎಸ್.ಎಸ್.ವೀರನಗೌಡ್ರ. ಶೈಲಜಾಅರಳಲೇಮಠ. ಎ.ಎನ್.ತಳಕಲ್.ಜಿ.ಎಸ್. ಸೊಪ್ಪಿಮಠ.ಎಲ್.ಎಸ್.ಹೊಸಮನಿ. ಆನಂದರಾವ್‌ದೇಸಾ.ಜೆ.ಎಸ್.ಹಿರೇಮಠ.ಡಿ.ಎಂ.ಬಡಿಗೇರ. ಸುಭಾಷಚಂದ್ರ ಗೌಡ ಎಸ್.ಜಿ.ಬೆಣ್ಣಿ ಎಮ್.ವಿ.ಕಾತರಕಿ ಡಿ.ಹೊಸಮನಿ. ಉಪಸ್ಥಿತರಿದ್ದರು. ವಿನೋದಕುಮಾರ ಶೆಟ್ಟರ್ ಪ್ರಾರ್ಥಿಸಿದರು. ವಿನೋದಕುಮಾರ  ಸ್ವಾಗತಿಸಿದರು.ಸ್ವಾತಿ ವಂದಿಸಿದರು. ಮೇಘಾ ವಿದ್ಯಾ ನಿರೂಪಿಸಿದರು.

Please follow and like us:
error

Leave a Reply

error: Content is protected !!